ನೊಂದಣಿ ಮಾಡಿಸದೇ, ಬೆಳಗಾವಿಯ ಗಾಂಧಿ ಮಾರ್ಕೇಟ್ ಕರುನೂರೆ ಗಲ್ಲಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಅಂಜುಮನ್ ಆಸ್ಪತ್ರೆ ಮತ್ತು ಪಟೇಲ್ ಕ್ಲಿನಿಕ್ ಬೆಳಗಾವಿಯ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಸೀಜ್ ಮಾಡಿದೆ.
ಹೌದು ಸೋಮವಾರದಂದು ಗಾಂಧಿ ಮಾರ್ಕೇಟ್ ಕರುನೂರೆ ಗಲ್ಲಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಅಂಜುಮನ್ ಆಸ್ಪತ್ರೆ ಮತ್ತು ಪಟೇಲ್ ಕ್ಲಿನಿಕ್ ಬೆಳಗಾವಿಯ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಸೀಜ್ ಮಾಡಿದೆ. ರಜಿಸ್ಟೆçÃಶನ್ ಮಾಡಿಸದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನೋಡಲ್ ಅಧಿಕಾರಿ ಡಾ.ಎಮ್.ವ್ಹಿ.ಕಿವಡಸನ್ನವರ, ತಾಲೂಕಾ ಆರೋಗ್ಯಾಧಿಕಾರಿ ಡಾ.ವಿವಿ ಶಿಂಧೆ, ಮಂಜುನಾಥ ಬಿಸನಳ್ಳಿ, ಎಚ್‌ಎ ವಡೆಯರ್, ಅವರು ಕ್ಲಿನಿಕ್ನ್ನು ಸೀಜ್ ಮಾಡಿದ್ದಾರೆ. ಖಾಸಗಿ ಆಸ್ಪತ್ರೆ ನೋಂದಣಿ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳದೇ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆಯಡಿ ಕ್ಲಿನಿಕ್ ಮಾಲೀಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.