Uncategorized

ಜೀವ ಭಾವಕ್ಕೆ ಚೈತನ್ಯ ಬಿಂದು” ಅಣ್ಣ ಬಸವಣ್ಣ:ಶಿಕ್ಷಕ ಸಾಹಿತಿ ಡಾ ಶೇಖರ ಹಲಸಗಿ

Share

ಹೂಲಿಕಟ್ಟಿ ಶಾಲೆಯಲ್ಲಿ ವಿಶ್ವ ಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ,ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಗೊಳಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಹಾಗೂ ಗುರುಬಳಗದವರು ವಚನ ಪಠನ ಕಾರ್ಯಕ್ರಮ ಜರುಗಿತು, ಭಕ್ತಿ ಭಂಡಾರಿ ಬಸವಣ್ಣ ನವರ ಕುರಿತು ಶಿಕ್ಷಕ ಸಾಹಿತಿ ಡಾ ಶೇಖರ ಹಲಸಗಿ ಯವರು ಮಾತನಾಡಿ ಯುಗದ ಗುರು ಬಸವಣ್ಣನ ನೆನೆದರೆ ಕಷ್ಟಗಳು ಕರಗಿ ಹೋಗುತ್ತವೆ. ಬಸವಣ್ಣ ಕೇವಲ ಧರ್ಮ ,ವಚನ,ಕಾಯಕ ಯೋಗಿ ಅಷ್ಟೇ ಅಲ್ಲದೆ, ಲಿಂಗಾಯತ ಧರ್ಮ ಸಂಸ್ಥಾಪಕ , ಮಾತ್ರ ಅಂತಾ ನಾವು ಭಾವಿಸದೆ ಆತನು 12 ನೆ ಶತಮಾನದ ದಕ್ಷಿಣ ಭಾರತದಲ್ಲಿ, ಅದು ಕನ್ನಡದ ನೆಲದಲ್ಲಿ ನಿಂತು ವಿಶ್ವ ಸಂದೇಶ ಸಾರುವ,ಸಮ ಸಮಾಜದ ಕನಸು ಕಂಡ ಅಪ್ರತಿಮ,ಜೊತೆಗೆ ಅನುಭವ ಮಂಟಪದ ರೂವಾರಿಯಾಗಿ ನೂರೆಂಟು ಜಾತಿ ವರ್ಗಗಳ ಭೇದಭಾವ ತೊರೆದು ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಅದಕ್ಕೊಂದು ಸಂವಿಧಾನದ ಪರಿಕಲ್ಪನೆಯನ್ನು ಕೊಡುಗೆಯಾಗಿ ನೀಡಿದ ಮಹಾನ್ ಪುರುಷ ಬಸವಣ್ಣನವರು ಎಂಬುದಾಗಿ ಇಂದು ಎಲ್ಲಕ್ಕೂ ಮೂಲ ಬಸವ ಎಂಬುದನ್ನು ಅರಿತು, ‘ಕರ್ನಾಟಕ ಗಣ ಸರಕಾರವು’ ವಿಶ್ವ ಗುರು ಬಸವಣ್ಣ ನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ನೆಂದು ಘೋಷಿಸುವ ಮೂಲಕ ನಮ್ಮ ನೆಲದ ಹಿರಿಮೆಗೆ ಭಾವನಾತ್ಮಕ ಬಲ ತಂದು ಕೊಟ್ಟಿರುವ ಸರಕಾರಕ್ಕೆ ಅಭಿನಂದಿಸುತ್ತ, ಬಸವಣ್ಣ ನವರ ಸಮಾನತೆ ಕನಸನ್ನು ನಾವುಗಳು ಇಂದು ಶಾಲೆಯ ಅಂಗಳದಲ್ಲಿ ಸಮ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡುವ ಮುಖೇನ ಸಾಕಾರಗೊಳಿಸುತ್ತಿದ್ದೇವೆ.. ಇಂದಿನ ಯುವಕರು ನಾಳಿನ ಪ್ರಜೆಗಳು ನೀವು ಇದನ್ನು ಮುಂದು ವರಿಸಿಕೊಂಡು ಹೋಗಲು ಕರೆನೀಡಿದರು.ಶಾಲೆಯ ಮಕ್ಕಳಿಗಾಗಿ ವಚನ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಎಲ್ಲಮಕ್ಕಳು ಭಾಗವಹಿಸಲು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ ಎಚ್ ನಾಯ್ಕ ವಹಿಸಿದ್ದರು,ಚಿತ್ರಕಲಾ ಶಿಕ್ಷಕರಾದ ಬಿ ಎಸ್ ಪಾಟೀಲ ಸ್ವಾಗತಿಸಿ 250 ಮಕ್ಕಳಿಗೆ ಸಿಹಿ ಹಂಚಿದರು ಶಾಲಾ ಗುರು ಬಳಗದ ಶ್ರೀಮತಿ ಎ ಎಸ್ ಅಡಕಿ, ಎಲ್ ಎನ್ ಕಣಬರಗಿ, ಶ್ರೀಮತಿ ಎಸ್ ಕೆ ಕದಂ ಶ್ರೀಮತಿ, ಕಾಂಚನಾ ಕದ್ದು, ಶ್ರೀಮತಿ ರಾಧಾ ಬಾಗಲಕೋಟ ಉಪಸ್ಥಿತರಿದ್ದರು. ಮಕ್ಕಳಿಂದ ಪೂಜಾ ಕಾರ್ಯಕ್ರಮ ಜರುಗಿತು ಕೊನೆಯಲ್ಲಿ ಕನ್ನಡ ಶಿಕ್ಷಕರಾದ ಎಸ್ ಎಸ್ ಹಿರೇಮಠ ವಂದಿಸಿದರು.

Tags: