ಬೆಳಗಾವಿಯಲ್ಲಿ ಎಸ್‌ಟಿಪಿ ಪ್ಲಾಂಟ್‌ಗೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಕೈಯಲ್ಲಿ ಪೆಟ್ರೋಲ್, ಕಟ್ಟಿಗೆ, ಕುಡಗೋಲು ಹಿಡಿದು ಪ್ರತಿಭಟಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ಮಾಡುತ್ತಿರುವ ಜಲಮಂಡಳಿಯ ಕ್ರಮಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಕೈಯ್ಯಲ್ಲಿ ಪೆಟ್ರೋಲ್, ಕಟ್ಟಿಗೆ, ಕುಡಗೋಲು ಜಲಮಂಡಳಿ ಇರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಓಲ್ಡ್ ಪಿಬಿ ರಸ್ತೆ ಹತ್ತಿರದ ರಾಷ್ಟಿçÃಯ ಹೆದ್ದಾರಿಯ ಪಕ್ಕ ಜಲ ಮಂಡಳಿಯ ವತಿಯಿಂದ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ಮಾಡಲು ಯೋಚಿಸಲಾಗುತ್ತಿದೆ. ಆದರೆ, ಆದರೆ ಇಲ್ಲಿನ ಸ್ಥಳೀಯ ರೈತರು ಜಲಮಂಡಳಿಯ ಕ್ರಮಕ್ಕೆ ತೀವೃ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದು ಹರಿಕಾಕಾ ಕಂಪೌAಡ್ ಬಳಿ ರೈತರು ಈ ಯೋಜನೆಗೆ ವಿರೋಧಿಸಿ ಕೈಯಲ್ಲಿ ಪೆಟ್ರೋಲ್, ಕಟ್ಟಿಗೆ, ಕುಡಗೋಲು ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಕೈಯ್ಯಲ್ಲಿ ಪೆಟ್ರೋಲ್ ಹಿಡಿದ ಮಹಿಳೆಯೋರ್ವರು, ನೀರು ಸರಬರಾಜು ಹಾಗೂ ಜಲಮಂಡಳಿಯ ಅಧಿಕಾರಿಗಳ ವಿರುದ್ಧ ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವೆಲ್ಲ ಲಂಚ ತೆಗೆದುಕೊಂಡು ಕೆಲಸ ಮಾಡುತ್ತಿದ್ದರಿ. ನೀವೆಲ್ಲ ವಾಚಿಕೆ ಇಲ್ಲದವರು, ನಾವು ನಿಮಗೆ ನಮ್ಮ ಒಂದಿAಚೂ ಜಮೀನನ್ನು ಕೊಡುವುದಿಲ್ಲ ಎಂದ್ಲುಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಲಮಂಡಳಿ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಗರಂ ಆದರು. ಈ ವೇಳೆ ರೈತ ನಾಯಕರು ಪೊಲೀಸ್ ರಕ್ಷಣೆಯಲ್ಲಿ ಭೂಸ್ವಾಧೀನಕ್ಕೆ ಬಂದ ಕೆಯುಡಬ್ಲುಎಸ್ ಇಂಜನೀಯರ್ ಜೊತೆಗೆ ವಾಗ್ವಾದಕ್ಕೆ ಇಳಿದರು. ಇನ್ನು ಸ್ಥಳಕ್ಕೆ ಆಗಮಿಸಿದ ಮಾಳಮಾರುತಿ ಠಾಣೆ ಸಿಪಿಐ ಸುನೀಲ್ ಪಾಟೀಲ್, ಪರೀಸ್ಥಿತಿಯನ್ನು ತಿಳಿಗೊಳಿಸಿದರು.
ಈ ವೇಳೆ ಮಾತನಾಡಿದ ರೈತ ರಮಾಕಾಂತ ಕುಂಡುಸ್ಕರ್, ಇಲ್ಲಿ ಮಹಾದೇವ ಗೋಡ್ಸೆ ಎಂಬವರ ೨ಎಕರೆ ೪ಗುಂಟೆ ಜಮೀನಿದೆ. ಅದರಲ್ಲಿ ಸರಕಾ ೧ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲು ಪಿಡಬ್ಲುಡಿ ಹಗೂ ಪಾಲಿಕೆ ಅಧಿಕಾರಿಗಳು ಬಂದಿದ್ದಾರೆ. ೨೦೧೩ರಲ್ಲಿಯೇ ಈ ಜಮೀನನ್ನು ಸ್ವಾಧೀನ ಮಾಡಿಕೊಂಡಿದ್ದೇವೆAದು ಹೇಳುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿರವರು ಹೇಳುವಂತೆ ಇದು ಕರಷಿ ಪ್ರಧಾನ ದೇಶವೆಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಸಣ್ಣ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಹಾಗಾಗಿ ನಾನೊಬ್ಬ ರೈತ ಸಂಘಟನೆಯ ಕಾರ್ಯಕರ್ತನಾಗಿ ರೈತನಾಗಿ ಇದನ್ನು ಖಂಡಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜು ಮೊರವೆ ಈಗಾಗಲೇ ಎಸ್‌ಟಿಪಿ ಘಟಕಕ್ಕೆ ನಗರದಲ್ಲಿ ಜಮೀನನ್ನು ಸ್ವಾಧೀನ ಮಾಡಿಕೊಂಡಿದ್ದಾರೆ, ಆದರೆ ಮತ್ತೆ ಇಲ್ಲಿ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದರು. ಇನ್ನು ಎಲ್ಲರೂ ರೈತನೇ ಈ ದೇಶದ ಬೆನ್ನೆಲುಬು ಅಂತಾರೆ ಆದರೆ ಸರಕಾರದವರು ಇ ರೀತಿ ಮಾಡಿ ರೈತರ ಬೆನ್ನೆಲುಬನ್ನೇ ಮುರಿದರೆ ಹೇಗೆ. ಇಲ್ಲಿರುವವರೆಲ್ಲ ಸಣ್ಣ ರೈತರು. ನೀವು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಮೊದಲಿ ರೈತರ ಅಭಿಪ್ರಾಯವನ್ನು ಪಡೆದಿಲ್ಲ. ರೈತರ ಒಪ್ಪಿಗೆಯಿಲ್ಲದೇ ನೀವು ಹೇಗೆ ಭೂಮಿಯನ್ನು ತೆಗೆದುಕೊಳ್ಳುತ್ತೀರಿ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಅಧಿಕಾರಿಗಳು ಹೇಳದೇ ಕೇಳದೇ ರೈತರ ಜಮೀನನ್ನುನ ಸ್ವಾಧೀನ ಮಾಡಿಕೊಳ್ಳುವತ್ತಿರುವುದಕ್ಕೆ ರೈತರಿಂದ ತೀವೃ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಈ ಕುರಿತಂತೆ ಇಲಾಖೆಯ ನಡೆ ಏನು ಎಂದು ಕಾದು ನೋಡಬೇಕಿದ.