Vijaypura

ಕಾಂಗ್ರೆಸ್ ಪಕ್ಷ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಶಾಸಕ ಯತ್ನಾಳ ಹೊಸ ಬಾಂಬ್

Share

ಕಾಂಗ್ರೆಸ್ ಪಕ್ಷ ಬಿಡೋರ ಲಿಸ್ಟ್ ನನ್ನ ಬಳಿ ಇದೆ ಎನ್ನೋ ಮೂಲಕ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗೇ ಬಿಜೆಪಿ ಬಿಡೋರ ಲಿಸ್ಟ್ ಕೂಡ ನನ್ನ ಬಳಿ ಇದೆ,ಅದನ್ನು ಕಾಲಕಾಲಕ್ಕೆ‌ ಹೇಳ್ತೀನಿ ಎಂದು ಹೊಸ ಬಾಂಬ್ ಸಿಡಿಸಿದರು.

6 ತಿಂಗಳು ತಡಿರಿ ಹೇಗೆ ನಡೆಯುತ್ತೆ ನೋಡಿ ಜಾದೂ ಎಂದರಲ್ಲದೇ ಕಾಂಗ್ರೆಸ್ ನಿಂದ ಪಕ್ಷ ಬಿಡೋರ ಸಂಖ್ಯೆ ಈಗ ಹೇಳಲು ಬರಲ್ಲ, ಕಾಂಗ್ರೆಸ್ ನಿಂದ ಸಿದ್ದರಾಮಯ್ಯರೇ ಬಿಟ್ಟರೆ ಅಚ್ಚರಿ ಇಲ್ಲ ಎಂದು ನಿನ್ನೆ ಹೇಳಿದ್ದೇನೆ ಎಂದರು. ಸಿದ್ಧರಾಮಯ್ಯ ಮುಗಿಸೋದೆ ಡಿಕೆಶಿ ಪಾದಯಾತ್ರೆ ಉದ್ದೇಶವಾಗಿದೆ. ಜನರಿಗಾಗಿ ಪಾದಯಾತ್ರೆ ಮಾಡಿಲ್ಲ, ದೇಶ ಆಳಿದ ಕಾಂಗ್ರೆಸ್ಸಿಗರು ಆಗ ಮೇಕೆದಾಟು, ಆಲಮಟ್ಟಿ ಹೋರಾಟ ಮಾಡಲಿಲ್ಲ, ಆವಾಗ ಕಾವೇರಿ ನ್ಯಾಯ ಬಗೆ ಹರಿಸಲಿಲ್ಲ ಎಂದರು.

ಅಧಿಕಾರ ಅನುಭವಿಸಿ, ಲೂಟಿ ಮಾಡಿ ಮತ್ತೆ ಅಧಿಕಾರಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಕಾಂಗ್ರೆಸ್ಸಿಗರು 30 ವರ್ಷ ಮಾಡಿದ ಲೂಟಿ ಹಣವನ್ನ ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿದರೇ ಎಲ್ಲ ನೀರಾವರಿ ಯೋಜನೆ ಮುಗಿಯುತ್ವೆ ಎಂದು ಹರಿಹಾಯ್ದರು. ಇನ್ನೂ ಸತೀಶ್ ಜಾರಕಿಹೊಳಿ ಮಹದಾಯಿ ಹೋರಾಟ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಹೀಗೆ ಮಾಡ್ತಿದೆ, ಜನರನ್ನ ಮರಳು ಮಾಡಲು ಹೀಗೆ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಖಂಡ್ರೆ ಕಲ್ಯಾಣ ಕರ್ನಾಟಕ ಹೋರಾಟದ ಹೇಳಿಕೆಗೆ ಕಿಡಿಕಾರಿದ ಯತ್ನಾಳ ಜನರು ಹುಚ್ಚರಿಲ್ಲ, ಅವರಿಗು ಎಲ್ಲ ತಿಳಿಯುತ್ತೆ ಕಾಂಗ್ರೆಸ್ ಯಶಸ್ವಿಯಾಗಲ್ಲ ಎಂದು ಭವಿಷ್ಯ ನುಡಿದರು.

Tags: