Belagavi

ಕ್ಯಾಬಿನೇಟ್ ಮೇಲೆ ಸಿಎಂಗೆ ಕಂಟ್ರೋಲ್ ಇಲ್ಲ: ರಮೇಶ ಕಾಂಗ್ರೆಸ್ ಸೇರ್ಪಡೆ 8ನೇ ಅದ್ಭುತ: ಸತೀಶ ಜಾರಕಿಹೊಳಿ ಲೇವಡಿ..!

Share

ಸಿಎಂ ಬೊಮ್ಮಾಯಿ ಅವರಿಗೆ ಅವರ ಕ್ಯಾಬಿನೆಟ್ ಮೇಲೆ ಕಂಟ್ರೋಲ್ ಇಲ್ಲ ಸಚಿವರು, ಶಾಸಕರು ಏನ್ ಏನೋ ಮಾತಾಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಆರು ತಿಂಗಳ ಪೂರೈಸಿದ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರಿಗೆ ಅವರ ಕ್ಯಾಬಿನೆಟ್ ಮೇಲೆ ಕಂಟ್ರೋಲ್ ಇಲ್ಲ ಸಚಿವರು, ಶಾಸಕರು ಏನ್ ಏನೋ ಮಾತಾಡ್ತಿದ್ದಾರೆ. ಸಿಎಂ ಅಂದ್ರೆ ಅವರ ಕೈಯಲ್ಲಿ ಎಲ್ಲವೂ ಕಂಟ್ರೋಲ್‍ನಲ್ಲಿ ಇರಬೇಕು. ಸಿಎಂ ಮೀರಿ ಯಾರು ಕೂಡಾ ಮಾತಾಡಬಾರದು. ಸಿಎಂಗೆ ತಮ್ಮ ಸಚಿವರು, ಶಾಸಕರ ಮೇಲೆ ಕಂಟ್ರೋಲ್ ಇಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜೆಡಿಸ್‍ಸ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಯಿಸಿದ ಸತೀಶ ಈ ಬಜೆಟ್ ಅಲ್ಲ ಮುಂದಿನ ಬಜೆಟ್ ಬಳಿಕ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆಗಲಿದೆ. ಯಾರು ಬರ್ತಾರೆ ಯಾರು ಬರುವುದಿಲ್ಲ ಅನ್ನೋದನ್ನ ಒಂದು ವರ್ಷ ಬಿಟ್ಟ ಬಳಿಕ ಹೇಳ್ತಿನಿ. ಆಗ ನಾನು ಅಧಿಕೃತವಾಗಿ ಹೇಳ್ತಿನಿ ಹೊರತು ಇವಾಗ ನಾನು ಯಾರು ಬರ್ತಾರೆ ಅನ್ನೋ ಲಿಸ್ಟ್ ಅಥವಾ ಯಾದಿ ನನ್ನ ಬಳಿ ಇಲ್ಲ. ಇನ್ನು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನಗೆ ಏನು ಗೊತ್ತಿಲ್ಲ. ಅದನ್ನ ಹೇಳಿದವರಿಗೆ ಕೇಳಿ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ವಿರುದ್ಧ ಸಿಎಂಗೆ ದೂರು ವಿಚಾರ ಅದು ಬಿಜೆಪಿ ಪಕ್ಷದ ವರಿಗೆ ಸಂಬಂಧಿಸಿದ್ದು, ಅವರ ಆಂತರಿಕ ವಿಚಾರಕ್ಕೆ ನಾನು ಏನು ಹೇಳಲ್ಲ. ಜಾರಕಿಹೊಳಿ ಕುಟುಂಬದ ವಿರುದ್ಧ ಕಾಂಗ್ರೆಸ್, ಬಿಜೆಪಿ ನಾಯಕರಿಂದ ಪಿತೂರಿ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರ್ಪಡೆ ವಿಚಾರ ಅದು ಜಗತ್ತಿನ ಏಂಟನೇ ಅದ್ಭುತ ಎಂದು ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.

ಇನ್ನು ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ್ ನಗ್ನ ಫೋಟೋ ವೈರಲ್ ಕುರಿತು ಮಾತನಾಡಿದ ಸತೀಶ ಬಿಜೆಪಿ ಅಧ್ಯಕ್ಷ ಮಾಡಿದ್ದು ತಪ್ಪು. ಅಶ್ಲೀಲ್ ಪೆÇೀಟೋ ಪೆÇೀಸ್ಟ್ ಮಾಡೋದು ಅಪರಾಧ. ಪೆÇಲೀಸರು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು. ಇನ್ನು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತ ಬರಲಿದೆ. ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಮತದಾರರು ಇರುವμÉ್ಟೀ ಇದ್ದಾರೆ. ಗೋವಾ ಚುನಾವಣೆಯಲ್ಲಿ ಯಾರು ಕೂಡಾ ಗೋವಾ ಕನ್ನಡಿಗರು ಟಿಕೆಟ್ ಕೇಳಿಲ್ಲ ಎಂದರು.

Tags: