ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭ ಹಾಗೂ 75ನೇ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆಯಲ್ಲಿ ಡ್ರೋನ್ ಲೈಟ್ ಶೋ ಆಯೋಜಿಸಲಾಗಿದೆ.
ದೆಹಲಿಯ ವಿಜಯ್ ಚೌಕ್ನಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಗಸದಲ್ಲಿ ಒಂದು ಸಾವಿರ ಡ್ರೋನ್ಗಳಿಂದ ಬೆಳಕಿನ ಚಿತ್ತಾರ ಮೂಡಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಡ್ರೋನ್ ಹಾರಾಟ ನಡೆಯಲಿದ್ದು. ಸಂಜೆ 6.15ರಿಂದ 10 ನಿಮಿಷಗಳ ಕಾಲ ಡ್ರೋನ್ ಲೈಟ್ ಶೋ ನಡೆಯಲಿದೆ.
ಭಾರತೀಯ ಸೇನಾ ಸಿಬ್ಬಂದಿಯಿಂದ ಇದೀಗ ಬ್ಯಾಂಡ್, ವಾದ್ಯ ಮೇಳ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿ ಆಯೋಜಿಸಿರುವ ಲೈಟಿಂಗ್ ಶೋ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಸೇನೆಯ 3 ವಿಭಾಗಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ.