Belagavi

ಗೋವಾದಿಂದ ಕಳ್ಳರನ್ನು ಹೆಡೆಮುರಿಕಟ್ಟಿ ಬೆಳಗಾವಿಗೆ ತಂದ ಪೊಲೀಸರು..!

Share

ಹುಬ್ಬಳ್ಳಿಯ ರವಿಕಿರಣ ನಾಗೇಂದ್ರ ಭಟ್ ಎಂಬವರನ್ನು ಬೆಳಗಾವಿ ನಗರದಲ್ಲಿ ಕಿಡ್ನಾಪ್ ಮಾಡಿ ಅವರಿಗೆ ಪಿಸ್ತೂಲ್ ತೋರಿಸಿದ ದುಷ್ಕರ್ಮಿಗಳು ಅವರಿಂದ ಹಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತಂತೆ ಭಟ್‍ರವರು ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ 18/01/2022 ರಂದು ಕಲಂ 307,342, 364(ಎ), 395ಹಾಗೂ 25(ಎ) ಗಳ ಅಡಿ ಪ್ರಕರಣ ದಾಖಲಿಸಿದ್ದರು. ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು 3ದಿನಗಳಲ್ಲಿ ಸದರಿ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಸಂಬಂಧ ಪೊಲೀಸ್, ಗಾಂಧೀನಗರದ ಬದ್ರುದ್ದಿನ್ ಆಯುಬ್ ಮುಲ್ಲಾ (30), ಹಾಗೂ ನೂರು ಅಹ್ಮದ್ ಅಲಿಯಾಸ್ ರಾಜು ಅಹ್ಮದ್ ಅಲಿ ಕಲ್ಲೂರ (30), ಖಾನಾಪುರದ ರವಿವಾರ ಪೇಟ್ ನಿವಾಸಿ ರೆಹಮಾನ್ ರಿಯಾಜ್ ಸಯ್ಯದ್ (35), ಇವರನ್ನು ವಶಕ್ಕೆ ಪಡೆದಿದ್ದಾರೆ. ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ರೇಲ್ ನಗರ ನಿವಾಸಿ ಕದ್ಮೀರ್ ಅಸೂಲ್ ಆಸೀಮ್(27), ಆರೀಫ್ ಇಬ್ರಾಹಿಂ ಮುಲ್ಲಾ(27), ಯಾಹೀಯಾ ಜಾಕ್ರಿಯಾ ಕಟಗೇರಿ(23), ಜುಬೇರ್ ರಶೀದ್ ಪಿರಜಾದೆ(27), ನಾಸೀಪ್ ನವಾಜ್‍ಖಾನ್ ಪಠಾಣ್(23), ರನ್ನು ಬಂಧಿಸಿ ಕರ್ನಾಟಕಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣವನ್ನು ಭೇಧಿಸಿದ ಸಿಬ್ಬಂದಿ ಕಾರ್ಯಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಾಡಿಡಿಸಿದ್ದಾರೆ.

Tags: