State

ನಾಳೆ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು: ಜನಕಲ್ಯಾಣ ಯೋಜನೆ ಕೊಡುತ್ತೇವೆ: ಸಿಎಂ ಭರವಸೆ

Share

ಸಮಸ್ಯೆಗಳು ಬಂದಾಗ ಕೂಡಲೇ ಸ್ಪಂದಿಸಿದ ಸರ್ಕಾರ ನಮ್ಮದು. ಇದಕ್ಕೆ ಯಾವುದೇ ಕಾರ್ಯಕ್ರಮ, ಆರು ತಿಂಗಳು, ನೂರು ದಿನ ಅಂತಾ ಏನೂ ಇಲ್ಲ. ನಿರಂತರವಾಗಿ ಜನರಿಗೆ ಸಹಾಯ ಮಾಡುವ, ಜನಕಲ್ಯಾಣ ಮಾಡುವಂತಹ ಯೋಜನೆಗಳನ್ನು ಕೊಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಕ್ಯಾಬಿನೇಟ್ ಸಭೆಗೂ ಮುನ್ನ ಬೆಂಗಳೂರಿನ ಆರ್‍ಟಿ ನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಕ್ಯಾಬಿನೇಟ್ ಸಭೆ ಅಜೆಂಡಾ ಪ್ರಕಾರ ಹೋಗುತ್ತದೆ. ಅದಾದ ಮೇಲೆ ಇತರೆ ವಿಷಯಗಳಲ್ಲಿ ಹಲವಾರು ವಿಷಯಗಳನ್ನು ಚರ್ಚೆ ಮಾಡುತ್ತೇವೆ. ಆದರೆ ಮುಂದೆ ಕೋವಿಡ್ ಯಾವ ರೀತಿ ನಿರ್ವಹಣೆ ಆಗಬೇಕು ಎಂಬ ಬಗ್ಗೆ ತಜ್ಞರಿಗೆ ವರದಿ ಕೊಡಲು ತಿಳಿಸಿದ್ದೇನೆ. ಅದು ಬಂದ ತಕ್ಷಣ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗ ತಜ್ಞರ ಜೊತೆಗೆ ಯಾವುದೇ ಸಭೆ ಇರೋದಿಲ್ಲ ಮೊದಲು ಅವರು ವರದಿ ಸಿದ್ಧಪಡಿಸಲಿ ಆಮೇಲೆ ಸಭೆ ಮಾಡುತ್ತೇವೆ. ಇನ್ನು ಇತರೆ ವಿಷಯಗಳಲ್ಲಿ ಸಚಿವರು ಏನಾದ್ರು ಚರ್ಚೆ ಮಾಡಿದ್ರೆ ಖಂಡಿತವಾಗಲೂ ಚರ್ಚೆ ಮಾಡುತ್ತೇವೆ ಎಂದರು.

: ನಾಳೆ ನಿಮ್ಮ ಹುಟ್ಟು ಹಬ್ಬ ಹಾಗೂ ನಿಮ್ಮ ಸರ್ಕಾರ ಆರು ತಿಂಗಳು ಪೂರೈಸುತ್ತದೆ ಹೀಗಾಗಿ ಏನಾದ್ರೂ ಹೊಸ ಘೋಷಣೆ ಮಾಡುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ಅವರು ನಾನು ಹುಟ್ಟು ಹಬ್ಬವನ್ನು ಯಾವತ್ತೂ ಆಚರಣೆ ಮಾಡಿಕೊಳ್ಳುವುದಿಲ್ಲ. ಆರು ತಿಂಗಳಲ್ಲಿ ಏನೆಲ್ಲಾ ಕೆಲಸಗಳು ಆಗಿವೆ ಮತ್ತು ಅವರು ಯಾವ ರೀತಿ ಜನರಿಗೆ ಉಪಯೋಗ ಆಗಿವೆ ಎಂಬ ಬಗ್ಗೆ ವಿವರ ಹೊಂದಿರುವ ಒಂದು ಪಕ್ಷಿನೋಟ ಬಿಡುಗಡೆ ಮಾಡುತ್ತೇವೆ ಎಂದರು.

ಯಾವುದೇ ಸರ್ಪರೈಸ್ ಘೋಷಣೆ ಮಾಡುವುದಿಲ್ಲ. ಆರು ತಿಂಗಳಿಗೆಲ್ಲಾ ಘೋಷಣೆ ಮಾಡುತ್ತಾರಾ ಎಂದು ಪ್ರಶ್ನಿಸಿದ ಸಿಎಂ ನಮ್ಮ ಸರ್ಕಾರ ಸ್ಪಂದನಾಶೀಲ ಸರ್ಕಾರ, ಯಾವಾಗ ಯಾವಾಗ ಸಮಸ್ಯೆಗಳು ಸೇರಿ ಇತರೆ ಸಂದರ್ಭದಲ್ಲಿ ಸ್ಪಂದನೆ ಮಾಡಿಕೊಂಡು ಬಂದಿದ್ದೇವೆ. ಇದಕ್ಕೆ ಆರು ತಿಂಗಳು ಅಥವಾ ಯಾವುದೇ ಕಾರ್ಯಕ್ರಮ ಬೇಕಾಗಿಲ್ಲ. ಜೋಳ ಖರೀದಿ ಬಗ್ಗೆ ಎಲ್ಲ ರೈತರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಅವಕಾಶ ಮಾಡಿಕೊಟ್ಟು, ಆಜ್ಞೆ ಮಾಡಿದ್ದೇವೆ. ಇನ್ನು ರಾಗಿ ಖರೀದಿಯನ್ನು ಮುಂದುವರಿಸುವ ಬಗ್ಗೆ ಕ್ಯಾಬಿನೇಟ್ ಸಬ್ ಕಮೀಟಿಯಲ್ಲಿ ಅನುಮೋದನೆ ಪಡೆದುಕೊಂಡು ರೈತರಿಗೆ ಅನುಕೂಲ ಮಾಡುವ ಕೆಲಸ ಮಾಡುತ್ತೇವೆ ಎಂದರು.

Tags: