ಆ ಯುವಕ ತನ್ನ ಕಾಮಿಡಿ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಹೆಸರು ಮಾಡಿದವ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದವ. ಕೇವಲ ತಾನೊಬ್ಬನೆ ಹೆಸರು ಮಾಡದೇ ಮತ್ತೊಬ್ಬರನ್ನು ಸೋಶಿಯಲ್ ಮಿಡಿಯಾ ಗೆ ಪರಿಚಯಿಸಿದವ. ಕೇವಲ ಸೋಶಿಯಲ್ ಮಿಡಿಯಾದಲ್ಲಿ ಕಾಮಿಡಿ ಅಲ್ಲದೇ, ಸಾಮಾಜಿಕ ಕಳಕಳಿಯುಳ್ಳ ವಿಡಿಯೋ ಮಾಡುತ್ತಾ ತನ್ನ ಸಮಾನ ಮನಸ್ಕ ಯುವಕರ ತಂಡ ಕಟ್ಟಿಕೊಂಡು ಐತಿಹಾಸಿಕ ನಗರಿ ವಿಜಯಪುರ ವನ್ನು ಸುಂದರ ನಗರವನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದ್ದಾನೆ. ಗಾನಯೋಗಿ ಸಂಘ ಎಂಬ ಹೆಸರಿನ ಸಂಘಟನೆ ಮಾಡಿಕೊಂಡು ಈ ಯುವಕರು ತಮ್ಮ ದುಡಿದ ಹಣದಲ್ಲಿ ಮಹಾನಗರ ಪಾಲಿಕೆ ಮಾಡಬೇಕಾದ ಕಾರ್ಯ ತಾವು ಮಾಡುತ್ತಿದ್ದಾರೆ. ಅಂದ ಹಾಗೆ ಆ ಯುವಕ ಯಾರು? ಆ ಯುವಕನ ಸಂಗಡಿಗರು ಯಾರು ಅನ್ನೋ ಕುರಿತು ಇಲ್ಲಿದೆ ಡಿಟೇಲ್ಸ್ …
ಹೀಗೆ ದೃಶ್ಯದಲ್ಲಿ ಇಲ್ಲೊಂದಷ್ಟು ಯುವಕರು ಟಿ ಶರ್ಟ್ ಧರಿಸಿ, ಕೊರಳಿಗೆ ಐಡಿ ಕಾರ್ಡ್ ಹಾಕಿಕೊಂಡು ಪಕ್ಕಾ ಕಾರ್ಮಿಕರ ಅಂತೆ ಕಾರ್ಯ ಮಾಡುತ್ತಿರುವ ಇವರನ್ನು ಸೋಶಿಯಲ್ ಮಿಡಿಯಾದಲ್ಲಿ ನೋಡೆ ಇರ್ತಿರಿ. ಇವರೆಲ್ಲರೂ ವಿಜಯಪುರ ನಗರದ ಗಾನಯೋಗಿ ಸಂಘದ ಸದಸ್ಯರು.ಇವರೆಲ್ಲರೂ ತಮ್ಮದೇ ಆದ ವೃತ್ತಿಗಳಲ್ಲಿ ತೊಡಗಿದ್ದಾರೆ. ಪ್ರತಿ ವಾರಕ್ಕೊಮ್ಮೆ ಎಲ್ಲರೂ ಒಂದೆಡೆ ಸೇರಿ ಬಸ್ ನಿಲ್ದಾಣ, ಮಾರುಕಟ್ಟೆ, ಬಾವಿಗಳ ಸ್ವಚ್ಚತಾ ಕಾರ್ಯ ನಡೆಸುತ್ತಾರೆ. ಗುಮ್ಮಟನಗರಿ ವಿಜಯಪುರವನ್ನು ಸುಂದರಗೊಳಿಸಲು ಪಣತೊಟ್ಟಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಪ್ರಕಾಶ ಆರ್.ಕೆ. ಎಂದು ಗೊತ್ತಿಲ್ಲದಿರುವವರು ಕಡಿಮೆಯೇ ತಮ್ಮ ಹಾಸ್ಯದ ಮೂಲಕ ಹೆಸರು ಮಾಡಿರುವ ಪ್ರಕಾಶ ಆರ್.ಕೆ.ಎಂಬ ಯುವಕನ ಗೆಳೆಯರು ಸೇರಿಕೊಂಡು ಗಾನಯೋಗಿ ಸಂಘಟನೆ ಮಾಡಿಕೊಂಡು ಸಾಮಾಜಿಕ ಸೇವೆಗೆ ಇಳಿದು ಸೈ ಎನಿಸಿಕೊಂಡಿದ್ದಾರೆ. ಇತ್ತಿಚೆಗೆ ಈ ಯುವಕರು ನಗರದ ಸ್ಟೇಶನ್ ರಸ್ತೆಯ ದರಬಾರ ಹೈಸ್ಕೂಲ್ ಹತ್ತಿರದ ಬಸ್ ಸ್ಟಾಪ್ ತುಂಬಾ ಮಲೀನಗೊಂಡಿದ್ದು ಅದಕ್ಕೆ ಅಂದವಾಗಿ ಅಚ್ಚುಕಟ್ಟಾಗಿ ಪೇಂಟ್ ಮಾಡಿ ಅದಕ್ಕೊಂದು ಸುಂದರ ರೂಪ ಗಾನಯೋಗಿ ಸಂಘದದಿಂದ ನೀಡಿದ್ದಾರೆ. ಈ ಸಂದರ್ಭದಲ್ಲಿ ಗಾನಯೋಗಿ ಸಂಘದ ಅಧ್ಯಕ್ಷರಾದ ಪ್ರಕಾಶ ಆರ್.ಕೆ. ನೇತೃತ್ವದಲ್ಲಿ ಸುಂದರ ರೂಪ ಕೊಟ್ಟಿದ್ದಾರೆ. ಪಾಲಿಕೆ ಮಾಡಬೇಕಾದ ಕಾರ್ಯವನ್ನು ಈ ಯುವಕರು ಮಾಡೊ ಮೂಲಕ ಪಾಲಿಕೆ ನಾಚಿಕೆ ಪಡುವಂತೆ ಆಗಿದೆ.
ಇನ್ನೂ ನಗರದ ದರಬಾರ ಹೈಸ್ಕೂಲ್ ಬಸ್‍ಸ್ಟಾಪ್ ಮಲೀನಗೊಂಡು ಬಸ್‍ಸ್ಟಾಪ್ ಜಾಗದಲ್ಲಿ ಗುಟ್ಕಾ, ತಂಬಾಕು, ಸಿಗರೇಟು ಹಾಗೂ ಕುಡುಕರ ತಾನವಾಗಿತ್ತು, ಇದನ್ನು ಗಮನಿಸಿದ ಗಾನಯೋಗಿ ಸಂಘವು ಹೈಸ್ಕೂಲ್ ಹತ್ತಿರ ಇರುವ ಬಸ್ ಸ್ಟಾಪ್ ಮಕ್ಕಳ ಮೇಲೆ ಸುತ್ತಮುತ್ತ ಕೆಟ್ಟ ಪರಿಣಾಮ ಬೀರಿತ್ತು, ಇದಕ್ಕೆ ಪೇಂಟ್ ಮಾಡಿ, ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ನಾಯಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಎಂಬ ಶಿರ್ಷಿಕೆಯನ್ನಿಟ್ಟುಕೊಂಡು ಗೊಡೆಯ ಮೇಲೆ ಸುಮಾರು 50 ಕ್ಕೂ ಹೆಚ್ಚು ದೇಶಕ್ಕಾಗಿ ಪ್ರಾಣ ತ್ಯಾಗಗೈದ ಮಹನೀಯರ ಹೆಸರನ್ನು ಆ ಬಸ್‍ಸ್ಟಾಪ್ ಗೋಡೆಯ ಮೇಲೆ ಬರೆಯಲಾಯಿತು. ಇದು ಮಕ್ಕಳಿಗೆ ಮಾದರಿಯಾಗಲೆಂಬ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳ ಲಾಯಿತು. ಈ ಸಂದರ್ಭದಲ್ಲಿ ಸಂತೋಷ ಚವ್ಹಾಣ, ಬಾಹುಬಲಿ ಶಿವಣ್ಣನವರ, ರವಿ ರತ್ನಾಕರ, ರಾಜಕುಮಾರ ಹೊಸಟ್ಟಿ, ವಿಕಾಸ ಕಂಬಾಗಿ, ಸಚೀನ ವಾಲಿಕಾರ, ಮಹೇಶ ಕುಂಬಾರ, ಆನಂದ ಹೊನವಾಡ, ಪ್ರಮೋದ ಚವ್ಹಾಣ, ರೇವಣಸಿದ್ದಯ್ಯ ಹಿರೇಮಠ, ವಿಠ್ಠಲ ಗುರುವಿನ, ಶ್ರೀಶೈಲ ಕುಮಸಗಿ, ವಿರೇಶ ಸೊನ್ನಲಿಗಿ, ಶ್ರೀಶೈಲ ಜುಮನಾಳ, ಸಚೀನ ಚವ್ಹಾಣ, ರಾಹುಲ ಎಮ್. ಬಾಬು ಮುಂತಾದವರು ಇದ್ದರು.
ಒಟ್ನಲ್ಲಿ ಸರಕಾರ ಮಾಡಬೇಕಾದ ಕಾರ್ಯವನ್ನು ತಮ್ಮ ಸ್ವಂತ ಹಣದಿಂದ ಮಾಡೋ ಮೂಲಕ ಗುಮ್ಮಟನಗರಿ ಜನತೆಯ ಮನದಲ್ಲಿ ನೆಲೆಸಿರುವ ಪ್ರಕಾಶ ಆರ್.ಕೆ. ನೇತೃತ್ವದ ಗಾನಯೋಗಿ ಸಂಘದ ಯುವಕರ ಕಾರ್ಯಕ್ಕೆ ಸರಕಾರವೇ ನಾಚಬೇಕಿದೆ. ಇನ್ನಾದರೂ ಸರಕಾರ ಇಂತಹ ಸಂಘಟನೆಗಳನ್ನು ಗುರುತಿಸಿ ಬೆನ್ನು ತಟ್ಟಲಿ ಎಂಬುದೇ ನಮ್ಮ ಆಶಯ.