Belagavi

ಪೊಲೀಸ್ ವಾಹನವನ್ನೇ ಎತ್ತಾಕೊಂಡೋದ ಟೋಯಿಂಗ್‌ ಸಿಬ್ಬಂದಿ

Share

ನೋ‌ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನವನ್ನೆ ಟ್ರಾಫಿಕ್ ಪೊಲೀಸರು ಹೊತ್ತೊಯ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌.

ಇಂದು ಸಂಜೆ ಬೆಳಗಾವಿಯ ಖಡೇ ಬಜಾರನಲ್ಲಿರುವ ಕಲ್ಯಾಣ ಜ್ಯುವೆಲ್ಲರ್ಸ ಮುಂದೆ ನೋ ಪಾರ್ಕಿಂಗ್ ಜಾಗದಲ್ಲಿ ಖಡೇ ಬಜಾರ್ ಪೊಲೀಸ್ ಠಾಣೆಯ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ದಕ್ಷಿಣ ಸಂಚಾರಿ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಇದು ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸ್ ವಾಹನ ವಶಕ್ಕೆ ಪಡೆದುಕೊಂಡು ಟೋಯಿಂಗ್ ವಾಹನದಲ್ಲಿ ತೆಗೆದುಕೊಂಡರು. ಈ ಮೂಲಕ ಪೊಲೀಸರೇ ಇರಲಿ, ಜನಸಾಮಾನ್ಯರೇ ಇರಲಿ ನಿಯಮ ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಬೆಳಗಾವಿ ಟ್ರಾಫಿಕ್ ಪೊಲೀಸರು ತೋರಿಸಿ ಕೊಟ್ಟಿದ್ದಾರೆ.

Tags: