Politics

ಫೆ.14-25ವರೆಗೂ ಜಂಟಿ ಅಧಿವೇಶನ: ಮಾರ್ಚ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ: ಸಿಎಂ ಬೊಮ್ಮಾಯಿ

Share

ಫೆಬ್ರವರಿ 14ರಂದು ಫೆಬ್ರವರಿ 25ರವರೆಗೆ ಜಂಟಿ ಅಧಿವೇಶನ ಕರೆಯಲು ತೀರ್ಮಾನಿಸಿದ್ದೇವೆ. ಮಾರ್ಚ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಕರೆಯುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಮುಗಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಕೋವಿಡ್‍ನ ಸ್ಥಿತಿಗತಿ, ಬರುವ ದಿನಗಳಲ್ಲಿ ಕೋವಿಡ್ ಯಾವ ರೀತಿ ನಿರ್ವಹಣೆ ಮಾಡಬೇಕು, ಬೇರೆ ಬೇರೆ ಸಂಘ ಸಂಸ್ಥೆಗಳು ಏನು ಮನವಿ ಮಾಡಿವೆ, ಶಾಲಾ ಕಾಲೇಜುಗಳ ಬಗ್ಗೆ ಎಲ್ಲ ಸಚಿವರು ತಮ್ಮ ವಿಚಾರ ಹೇಳಿದ್ದಾರೆ. ಅದಕ್ಕೆ ತಜ್ಞರ ಸಮಿತಿಗೆ ಈಗಾಗಲೇ ಎಲ್ಲ ವಿಷಯ ಕೊಟ್ಟಿದ್ದೇವೆ. ಹೀಗಾಗಿ ತಜ್ಞರ ವರದಿ ಬಂದ ಬಳಿಕ ಮೂರ ನಾಲ್ಕು ದಿನದ ಒಳಗೆ ಒಂದು ಸಭೆ ಮಾಡಿ ಒಂದು ತೀರ್ಮಾನ ಮಾಡುತ್ತೇವೆ ಎಂದರು.

ಇನ್ನು ಬಿಬಿಎಂಪಿ ಚುನಾವಣೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಚುನಾವಣೆ ಯಾವಾಗಲಾದ್ರೂ ಬರಲಿ, ಅತ್ಯಂತ ಯಶಸ್ವಿಯಾಗಿ ನಿಭಾಯಿಸಬೇಕು. ಬೆಂಗಳೂರಿನ ಸಚಿವರ ಜೊತೆಗೆ ಹೊರಗಿನ ಸಚಿವರನ್ನು ನಿಯೋಜಿಸಿ ಯಶಸ್ವಿ ಮಾಡುವ ತೀರ್ಮಾನ ಮಾಡಿದ್ದೇವೆ. ಅದೇ ರೀತಿ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಮಂತ್ರಿಗಳು ಎಲ್ಲ ಶಾಸಕರ ಜೊತೆಗೆ ಇಲಾಖೆಯಲ್ಲಿ ಅವರ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಲಾಗಿದೆ ಎಂದರು. ನಾಳೆ ನಮ್ಮ ಸರ್ಕಾರಕ್ಕೆ ಆರು ತಿಂಗಳು ತುಂಬುತ್ತಿದೆ. ನಾವು ಏನು ಕಾರ್ಯಕ್ರಮ ಮಾಡಿದ್ದೇವೆ

ಅದರ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ 2023ರವರೆಗೂ ನಾವು ಯಾವ್ಯಾವ ಜೋಡಿಸಬೇಕು, ಆರು ತಿಂಗಳ ಕಾರ್ಯಕ್ರಮಗಳ ಬಗ್ಗೆ ಯಾವ ರೀತಿ ಪ್ರಚಾರ ಮಾಡಬೇಕು, ತಮ್ಮ ತಮ್ಮ ಇಲಾಖೆ ಪ್ರಚಾರವನ್ನು ಎಲ್ಲಾ ಸಚಿವರು ಟಿವಿ, ಮುದ್ರಣ ಮಾಧ್ಯಮಗಳಿಗೆ ತಿಳಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.

ಪಕ್ಷದ ಅಧ್ಯಕ್ಷರು ಬರುವ ದಿನದಲ್ಲಿ ಪಕ್ಷದ ಸಂಘಟನೆ ಮತ್ತು ಸರ್ಕಾರದ ನಡುವೆ ಸಮನ್ವಯತೆ ಮಿಟಿಂಗ್ ಮುಂದೆ ಹೋಗಿತ್ತು. ಅದನ್ನು ಆದಷ್ಟು ಬೇಗನೆ ಮಾಡಿ, ನಾವೆಲ್ಲರೂ ಒಗ್ಗಟ್ಟಾಗಿ, ಒಂದಾಗಿ ಹೋಗಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ಫೆಬ್ರವರಿ 14ರಂದು ಫೆಬ್ರವರಿ 25ರವರೆಗೆ ಜಂಟಿ ಅಧಿವೇಶನ ಕರೆಯಲು ತೀರ್ಮಾನಿಸಿದ್ದೇವೆ. ಮಾರ್ಚ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಕರೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಾ.ಓ: ಸಂಪುಟ ಸಭೆಯಲ್ಲಿ ಉಸ್ತುವಾರಿ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಯಾರಿಗೂ ಅಸಮಾಧಾನವೂ ಆಗಿಲ್ಲ ಎಂದ ಸಿಎಂ ಬೊಮ್ಮಾಯಿ ಅವರು ದೆಹಲಿ ಪ್ರವಾಸದ ಕುರಿತು ವರಿಷ್ಠರ ಜೊತೆಗೆ ಮಾತನಾಡುತ್ತಿದ್ದೇನೆ. ವರಿಷ್ಠರು ಕರೆದರೆ ದೆಹಲಿಗೆ ಹೋಗುತ್ತೇನೆ. ಸಾಮಾನ್ಯವಾಗಿ ನಮ್ಮ ಸಂಸತ್ತು ಅಧಿವೇಶನ ಪ್ರಾರಂಭವಾದಾಗ ಎಲ್ಲಾ ಸಂಸದರ ಜೊತೆಗೆ ಸಭೆ ಮಾಡುವುದನ್ನು ಸಿಎಂಗಳು ಮಾಡಿಕೊಂಡು ಬಂದಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದರು.

Tags: