Belagavi

ಬಿಜೆಪಿ ಗೆಲುವು ಹಿಂದುತ್ವದ ಗೆಲುವು-ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಹಿಂದುತ್ವದ ಗೆಲುವು ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ನೂತನ ೩೫ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.ಪ್ರಜ್ಞಾವಂತ ಮತದಾರರು ಈ ಬಾರಿ ಹಿಂದುತ್ವದ ಜೊತೆಗೆ ಶಾಸಕರ ಅಭಿವೃದ್ಧಿ ಕಾರ್ಯ ವನ್ನು ಗಮನಿಸಿ ಮತನೀಡಿದ್ದಾರೆ. ಹೀಗಾಗಿ ಬೆಳಗಾವಿ ಪಾಲಿಕೆಯದ್ದು ಹಿಂದು ಸಂಸ್ಕೃತಿಯ ಗೆಲುವು ಎಂದು ಬಣ್ಣಿಸಿದರು. ಮೇಲಾಗಿ ಈ ಗೆಲುವು ಹಿಂದೂ ಸಂಸ್ಕ್ರತಿಯ ಗೆಲುವು ಎಂದು ಕಟೀಲ್ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಆಧಾರದ ಮೇಲೆಯೇ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ನಮ್ಮ ನಿಲುವಿಗೆ ಶಾಸಕ ಅಭಯ ಪಾಟಣಿಲ  ಶಾಸಕ ಬೆನಕೆ  ಮತ್ತು ಇನ್ನಿತರ ಎಲ್ಲ ಮುಖಂಡರು  ಸ್ಪಂದನೆ ನೀಡಿ ಎಲ್ಲ ಜವಾಬ್ದಾರಿ ಹೊತ್ತುಕೊಂಡು ಕೆಲಸ ನಿರ್ವಹಿಸಿದರು‌.
ಈಗ ಗೆದ್ದವರು ಬಹುತೇಕ ಶೇ. ೯೮ ರಷ್ಟು ಹೊಸವರು. ಹೀಗಾಗಿ ನಿಮ್ಮ‌ನಿಮ್ಮ‌ ವಾರ್ಡಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಪಾಲಿಕೆ ಚುನಾವಣೆಯ ಕಿಂಗಪಿನ್ ಶಾಸಕ ಅಭಯ ಪಾಟೀಲ ಮಾತನಾಡಿ, ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಸಲು  ಸಮ್ಮತಿ ಸೂಚಿಸಿದ ಹೈಕಮಾಂಡಗೆ ನಾನು ಋಣಿ ಎಂದರು. ಯಾವಾಗ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಘೋಷಣೆ ಆಯಿತೋ ಆಗಲೇ ಫಲಿತಾಂಶ   ಸ್ಪಷ್ಟವಾಗಿತ್ತು. ಈಗ ಗೆದ್ದಿರುವ  ನಗರಸೇವಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಶಾಸಕ ಅನಿಲ ಬೆನಕೆ,  ಚಂದ್ರಶೇಖರ ಕವಟಗಿ, ಶಶಿಕಾಂತ ಪಾಟೀಲ, ನಿರ್ಮಲಕುಮಾರ ಸುರಾಣಾ ಮತ್ತಿತರರು ಮಾತನಾಡಿದರು. ನಗರಸೇವಕರ ಪರವಾಗಿ ಗಿರೀಶ ಧೋಂಗಡಿ, ಸಾರಿಕಾ ಪಾಟೀಲ ಸಹ ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಪಕ್ಷದ ನಾಯಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಸಹಕಾರವನ್ನು ಶಾಸಕ ಅಭಯ ಪಾಟೀಲ ಸ್ಮರಿಸಿದರು.
ಶಾಸಕ ಅಭಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕಬಟಗಿಮಠ ನೇತೃತ್ವದಲ್ಲಿ ನೂತನ‌ ನಗರಸೇವಕರು ಮುಖ್ಯಮಂತ್ರಿಗಳನ್ಬು ಬೆಟ್ಟಿಯಾದರು.
ವಿಧಾನಸೌಧದಲ್ಲಿ ಬೆಳಿಗ್ಗೆ ನಗರ ಸೇವಕರು ಮುಖ್ಯಮಂತ್ರಿ ಗಳೊಂದಿಗೆ ಚರ್ಚೆ ನಡೆಸಿದರು. ಈ‌ ಸಂದರ್ಭದಲ್ಲಿ ಶಾಸಕ‌ ಅಭಯ ಪಾಟೀಲರು ಸರ್ಕಾರದ ಸಾಧನೆಗಳು ತಮಗೆ ಯಾವ ರೀತಿ ಸಹಾಯವಾಯಿತು ಎನ್ನುವುದನ್ನು ಬಿಚ್ಚಿಟ್ಟರು. ಮುಖ್ಯಮಂತ್ರಿ ಗಳು ಕೂಡ ಶಾಸಕ ಅಭಯ ಪಾಟೀಲರ ಕಾರ್ಯಕ್ಕೆ ಶಹಬ್ಬಾಸಗಿರಿ‌ ನೀಡಿದರು.ಹಿಂದೂ ಸಂಸ್ಕ್ರತಿಯ ಸಂಕೇತ ದಂತಿರುವ ಪೇಟಾ ಸುತ್ತಿಕೊಂಡ ನಗರಸೇವಕರು ರಾಜಧಾನಿಯಲ್ಲಿ ಎಲ್ಲರ ಗಮನ ಸೆಳೆದರು.ಸಚಿವ ಗೋವಿಂದ ಕಾರಜೋಳ , ಸಂಸದೆ ಮಂಗಲಾ ಅಂಗಡಿ, ಎಂ..ಜಿರಲಿ, ಆರ್.ಎಸ್ ಮುತಾಲಿಕ ದೇಸಾಯಿ, ಶಶಿಕಾಂತ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Tags: