Belagavi

ಬೆಳಗಾವಿಯಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ಎಂಪ್ಲಾಯಿ ವೆಲ್‍ಫೇರ್ ಅಸೊಸಿಯೇಷನ್ ಉದ್ಘಾಟನೆ

Share

ಬೆಳಗಾವಿ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ಎಂಪ್ಲಾಯಿ ವೆಲ್‍ಫೇರ್ ಅಸೊಸಿಯೇಷನ್‍ನ್ನು ಉದ್ಘಾಟಿಸಲಾಯಿತು.

ಶನಿವಾರ ಸಾಯಂಕಾಲ ಬೆಳಗಾವಿ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ಎಂಪ್ಲಾಯಿ ವೆಲ್‍ಫೇರ್ ಅಸೊಸಿಯೇಷನ್‍ನ್ನು ಎಂಎಲ್‍ಸಿ ಹಣಮಂತ ನಿರಾಣಿ ಮತ್ತು ಮಾಜಿ ಶಾಸಕ ಫಿರೋಜ್ ಸೇಠ್ ಉದ್ಘಾಟಿಸಿದರು. ನೂತನ ಪದಾಧಿಕಾರಿಗಳಿಗೆ ವೇದಿಕೆ ಮೇಲಿದ್ದ ಗಣ್ಯರು ಸತ್ಕರಿಸಿ ಗೌರವಿಸಿದರು. ಬಳಿಕ ಸಂಘದ 2022ನೇ ಸಾಲಿನ ಕ್ಯಾಲೆಂಡರ್‍ನ್ನು ಕೆಎಸ್‍ಆರ್‍ಪಿ ಕಮಾಂಡೆಂಟ್ ಹಂಜಾ ಹುಸೇನ್ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಫಿರೋಜ್ ಸೇಠ್ ಮಾತನಾಡಿ ಯಾವುದೇ ಸಂಘ ಮಾಡಿದ್ರೆ ಅದು ಕೇವಲ ಸಂಘದ ಸದಸ್ಯರಿಗೆ ಮಾತ್ರ ಉಪಯೋಗ ಆಗಬಾರದು ಇಡೀ ಸಮಾಜಕ್ಕೆ ಅದು ಅರ್ಪಣೆ ಆಗಬೇಕು. ಅನೇಕ ಜನರು ತಮ್ಮ ಸ್ವಾರ್ಥಕ್ಕೋಸ್ಕರ ಸಂಘ, ಸಂಸ್ಥೆಗಳನ್ನು ಕಟ್ಟುತ್ತಾರೆ. ಆದರೆ ಸಮಾಜದ ಬಡ, ನಿರ್ಗತಿಕ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಕೆಲಸವನ್ನು ಸಂಘಗಳು ಪ್ರಾಮಾಣಿಕವಾಗಿ ಮಾಡಬೇಕು. ಈ ಸಂಘ ಕೇವಲ ಮುಸ್ಲಿಂ ಸಂಘಟನೆ ಅಂತಾ ಅಂದುಕೊಳ್ಳದೇ ಎಲ್ಲ ಸಮಾಜಗಳ ಸಂಘಟನೆಗಳ ಜೊತೆಗೆ ಅನ್ಯೋನ್ಯತೆಯಿಂದ ಕೆಲಸ ಮಾಡಿ ಸಮಾಜದಲ್ಲಿ ಸೌಹಾರ್ದತೆಯ ವಾತಾವಾರಣ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.

ನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಸೇಠ್, ಡಿಡಿಪಿಐ ಬಿ.ಎಮ್.ನಾಲತವಾಡ್, ಡಯಟ್ ಪ್ರಿನ್ಸಿಪಾಲ್ ಎಂ.ಎಂ.ಸಿಂಧೂರ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ಎಂಪ್ಲಾಯಿ ವೆಲ್‍ಫೇರ್ ಅಸೊಸಿಯೇಷನ್ ಅಧ್ಯಕ್ಷ ಸಲೀಂ ನದಾಫ್, ಸಲೀಂ ಹಂಚಿನಮನಿ, ಅನ್ವರ್ ಲಂಗೋಟಿ, ಡಾ.ಎಚ್.ಐ.ತಿಮ್ಮಾಪುರ, ಆರ್.ಸಿ.ಅತ್ತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: