Belagavi

ಬೆಳಗಾವಿಯಲ್ಲಿ ೨ನೇ ಬಾರಿ ಮತ್ತೇ… ಅದೇ ದೇವಸ್ಥಾನವನ್ನ ಟಾರ್ಗೇಟ್ ಮಾಡಿದ ಕಳ್ಳರು…!!!

Share

ದೇವರನ್ನ ಕಂಡು ಈಗೀನ ದಿನಮಾನದಲ್ಲಿ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಇಷ್ಟು ದಿನ ಮನೆ – ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಎರಡನೇ ಬಾರಿ ಮತ್ತೆ ಬೆಳಗಾವಿ ಸಮರ್ಥ ನಗರದಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.

ಬೆಳಗಾವಿ ನಗರ ಮತ್ತು ಪ್ರದೇಶದಲ್ಲಿ ಕಳ್ಳರು ರಾಜಾರೋಷವಾಗಿ ತಮ್ಮ ಕೆಲಸ ಶುರು ಹಚ್ಚಿಕೊಂಡು ಬಿಟ್ಟಿದ್ದಾರೆ. ಈಗ ಮತ್ತೊಂದು ಬಾರಿ ಬೆಳಗಾವಿಯ ಓಲ್ಡ್ ಪಿಬಿ ರೋಡ್ ಸಮರ್ಥ ನಗರ ಕ್ರಾಸ್‌ನಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ-ಚಿನ್ನದ ಆಭರಣಗಳನ್ನ ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಎಂದಿನAತೆ ದೇವಸ್ಥಾನದ ಅರ್ಚಕರು ಬೆಳಿಗ್ಗೆ ಪೂಜೆಗೆ ಬಂದಾಗ ದೇವಸ್ಥಾನದ ಬೀಗ ಮುರಿದಿದ್ದು ಕಂಡು ಬಂದಿದೆ.

ಕೂಡಲೇ, ಮಾರ್ಕೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳರನ್ನ ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಮರ್ಥ ನಗರ ಮತ್ತು ತಾನಾಜೀ ಗಲ್ಲಿಯ ನಾಗರೀಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಕಳೆದ ಬಾರಿ ಪಾಂಗುಳ ಗಲ್ಲಿಯಲ್ಲಿರುವ ಶ್ರೀ ಅಶ್ವಥಾಮಾ ಮಂದಿರದಲ್ಲಿಯೂ ಕಳ್ಳತನವಾಗಿತ್ತು. ಈಗ ಎರಡನೇ ಬಾರಿ ಸಮರ್ಥನಗರದ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ನಾಗರೀಕ ಕಳ್ಳರನ್ನ ಪತ್ತೆ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

Tags: