ಬೆಳಗಾವಿ ಜಿಲ್ಲೆಯ ಲೇಖಕಿಯರ ಸಂಘ ಹಾಗೂ ಸಾಹಿತ್ಯ ಕಲಾ ವೇದಿಕೆ ಮಹಿಳಾ ಸಂಘ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ರಂಜನಾ ನಾಯಿಕ್ ಬರೆದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ನಗರದ ಕಿತೂರ ಚೆನ್ನಮ್ಮಾ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಮತಿ ರಂಜನಾ ನಾಯಿಕ್‍ರ “ಕಾರಂತ್ ನೆನಪಿನ ಕಾರವಾನ್” ಹಾಗೂ ಇಪ್ಪತ್ತೊಂದು ಬೆಳಕು ನೆರಳಿನಾಟ, ನಾಟಕ ಕೃತಿಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಬಾಳಾಸಾಹೇಬ್ ಲೋಕಾಪೂರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಡಾ. ಬಾಳಾಸಾಹೇಬ್ ಲೋಕಾಪೂರ್, ಸಾಹಿತ್ಯದ ವಿವಿಧ ಪ್ರಕರಗಳಲ್ಲಿ ನಾಟಕ ವಿಶಿಷ್ಟ ಪ್ರಕಾರವಾಗಿದೆ. ನಾಟಕವನ್ನು ಕೇಳಬಹುದು, ಓದಬಹುದು ಹಾಗೂ ನೋಡಬಹುದು. ಅಂಥ ವಿಶಿಷ್ಟಬಗೆಯ ಸಾಹಿತ್ಯದ ಪ್ರಕಾರ ಇದಾಗಿದೆ. ದೃಶ್ಯ ಮಾಧ್ಯಮಕ್ಕೆ ಕೇವಲ ಸಾಹಿತ್ಯ ಪರಿಕರ ಸಾಲದು. ಅದಕ್ಕೆ ಬೆಳಕು ಹಾಗೂ ಇನ್ನಿತರ ಪರಿಕರಗಳ ಅವಶ್ಯವಿದೆ. ಹಾಗಾಗಿ ನಾಟಕ ಸಾಹಿತ್ಯದ ಬಹು ಸಂಕೀರ್ಣ ಭಾಗ ಎಂದರು.
ಈ ಸಂದರ್ಭದಲ್ಲಿ ಬೆಳಗಾವೀ ಲೇಖಕಿಯರ ಸಂಘದ ಅಧ್ಕ್ಷೆ ಹೇಮಾವತಿ ಸೊನಳ್ಳಿ, ಡಾ. ಗುರುದೇವಿ ಹುಲೆಪ್ಪನವರಮಠ, ಡಾ. ನಿರ್ಮಲಾ ಬಟ್ಟಲ್, ಡಾ. ಶೋಭಾ ನಾಯಿಕ್, ಹಮೀದಾ ಬೇಗಂ ದೇಸಾಯಿ, ಇಂದಿರಾ ಮೂಟೆಬೆನ್ನೂರು, ರಾಜನಂದಾ ಘಾರ್ಗಿ ಮೊದಲಾದವರು ಉಪಸ್ಥಿತರಿದ್ದರು.