Belagavi

ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಟ್ಟು 96 ಹೊಸ ಕೊವಿಡ್ ಪ್ರಕರಣಗಳು

Share

ಬೆಳಗಾವಿ ಜಿಲ್ಲೆಯಲ್ಲಿಂದು ಕೊರೊನಾ ಅಟ್ಟಹಾಸ ಕಡಿಮೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಟ್ಟು 96 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ.

ರವಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಬುಲೆಟಿನ್ ಪ್ರಕಾರ ಜಿಲ್ಲೆಯಾದ್ಯಂತ ಒಟ್ಟಾರೆ 96 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 99491 ಕ್ಕೆ ಏರಿಕೆಯಾಗಿದೆ. ಈವರೆಗೆ 93759 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 992ಕ್ಕೆ ಏರಿಕೆಯಾಗಿದೆ. 4740 ಸಕ್ರೀಯ ಪ್ರಕರಣಗಳು ಬಾಕಿ ಇವೆ.
ಅಥಣಿ-6, ಬೆಳಗಾವಿ- 33, ಬೈಲಹೊಮಗಲ್-10, ಚಿಕ್ಕೋಡಿ-5, ಗೋಕಾಕ್-16, ಹುಕಕೇರಿ-5, ಖಾನಾಪುರ-4, ರಾಮದುರ್ಗ-8, ರಾಯಬಾಗ್-1, ಸವದತ್ತಿ-8, ಪ್ರಕರಣಗಳು ಪತ್ತೆಯಾಗಿದೆ

Tags: