ಬೈಕ್‍ಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮಾಜಿ ಗ್ರಾಪಂ ಸದಸ್ಯ ಸಾವನ್ನಪ್ಪಿದ ಘಟನೆ ವಿಜಯಪುರ ತಾಲೂಕಿನ ಸಿಂದಗಿ ರಸ್ತೆಯ ಲಕ್ಷ್ಮೀ ದೇಗುಲ ಬಳಿ ನಡೆದಿದೆ.
ಮೋಹನ್ ರಾಠೋಡ್(42) ಮೃತ ಬೈಕ್ ಸವಾರನಾಗಿದ್ದು ಮೃತ ಬೈಕ್ ಸವಾರ ಹಡಗಲಿ ಎಲ್‍ಟಿ ಗ್ರಾಮದ ನಿವಾಸಿಯಾಗಿದ್ದಾನೆ. ಮೋಹನ್ ರಾಠೋಡ್, ಮಾಜಿ ಗ್ರಾಪಂ ಸದಸ್ಯನಾಗಿದ್ದು ವಿಜಯಪುರದಿಂದ ಬೈಕ್ ಮೇಲೆ ಹಡಗಲಿ ಎಲ್‍ಟಿಗೆ ತೆರಳುವಾಗ ಕಾರು ಡಿಕ್ಕಿಯಾಗಿದೆ. ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.