ಮಾಜಿ ಶಾಸಕ ಎಂ ಎಂ ಸಜ್ಜನ್ (95) ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಶಾಸಕರು ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಅಂದಿನ ಅಖಂಡ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿ 1972-78 ರವರೆಗೆ ಸೇವೆ ಸಲ್ಲಿಸಿದ್ದರು. ಇಂದು ಸಾಯಂಕಾಲ 4 ಗಂಟೆಗೆ ಮುದ್ದೇಬಿಹಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಾಜಿ ಶಾಸಕ ಎಂ ಎಂ ಸಜ್ಜನ ನಿಧನಕ್ಕೆ ವಿವಿಧ ಮಠಾದೀಶರ, ಗಣ್ಯರ ಹಾಗೂ ರಾಜಕಾರಣಿಗಳ ಸಂತಾಪ ಸೂಚಿಸಿದ್ದಾರೆ.