Belagavi

ರಾಜಕಾರಣ ಬಿಟ್ಟು ಅಭಿವೃದ್ಧಿ ಕೆಲಸದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಬ್ಯುಜಿ

Share

ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ರಾಜ್ಯ ರಾಜಕಾರಣ ಜೋರಾಗಿ ಸದ್ದು ಮಾಡುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಧೃವೀಕರಣದತ್ತ ಕಣ್ಣಿಟ್ಟಿದ್ದು, ಪರಸ್ಪರ ಆರೋಪ, ಪ್ರತ್ಯಾರೋಪ, ಪಕ್ಷಾಂತರ ಚಟುವಟಿಕೆಗಳು ಅಬ್ಬರಿಸತೊಡಗಿವೆ. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನಿರಂತರವಾಗಿ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಸುಮಾರು 8 ದಿನಗಳಿಂದ ನಿತ್ಯ 3 -4 ಅಭಿವೃದ್ಧಿ ಯೋಜನೆಗಳು ಚಾಲನೆ ಪಡೆಯುತ್ತಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ದಿನವಿಡೀ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದರಲ್ಲಿ ತಲ್ಲೀನರಾಗಿದ್ದಾರೆ.
ಗುರುವಾರ ಸಾಂಬ್ರಾ ಗ್ರಾಮದ ಏರ್ಪೊರ್ಸ್ ಪಕ್ಕದಲ್ಲಿರುವ ರಸ್ತೆಯ ಸುಧಾರಣೆಯ ಸಲುವಾಗಿ ಎಸ್ ಸಿ ಪಿ ಅನುದಾನದಲ್ಲಿ 13 ಲಕ್ಷ ರೂ,ಗಳ ವೆಚ್ಚದಲ್ಲಿ ಸಿಸಿ ರಸ್ತೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿದರು.

ಈ‌ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳು, ನಾಗೇಶ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.

ನಂತರ ಮೊದಗಾ ಗ್ರಾಮದ‌ ನಿರ್ಮಲ ನಗರ ಶಾಲೆಯ ಎದುರಿನ ನೂತನ ರಸ್ತೆಯ ನಿರ್ಮಾಣದ ಸಲುವಾಗಿ ಎಸ್ ಟಿ ಪಿ ಅನುದಾನದ ವತಿಯಿಂದ 13.74 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ನಿವಾಸಿಗಳು, ಗಂಗಣ್ಣ ಕಲ್ಲೂರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾಂಚನಾ ಸಿದ್ದಪ್ಪ ನಾಯ್ಕ್, ಉಪಾಧ್ಯಕ್ಷರಾದ ನಮೃತಾ ಕಾಳೆ, ಶಿವಾನಂದ ರಾಜಗೊಳಿ, ಶಿವಾಜಿ ಅಷ್ಟೇಕರ್, ಮಂಗಲ ತಾರಿಹಾಳ, ಭಾಗಿರಥಿ ಧಾನೋಜಿ, ಮಾರುತಿ ಮುಗಳಿ, ಪೋತದಾರ ಸರ್, ಇಬ್ರಾಹಿಂ ಯರಗಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಚೆಕ್ ಹಸ್ತಾಂತರ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದ ಶ್ರೀ ಸಾಯಿ‌ ಮಂದಿರದ ಜೀರ್ಣೋದ್ಧಾರದ ಸಲುವಾಗಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ,ಗಳ ಪೈಕಿ ಎರಡನೇ ಕಂತಿನ ಚೆಕ್ ನ್ನು ಮಂದಿರದ ಟ್ರಸ್ಟ್ ಕಮೀಟಿಯವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಸದಸ್ಯರಾದ ರೂಪ ಸನ್ಮನಿ, ಮೀರಾ ದೇಶಪಾಂಡೆ, ರವಿ ಕೊಟಬಾಗಿ, ಶೀಲಾ ತಿಪ್ಪಣ್ಣಗೋಳ, ಮಾರುತಿ ಪಾಟೀಲ, ಸೋಮನಿಂಗ ಸನ್ಮನಿ, ವಿನೋದ ಅಂಬೇಕರ್, ಕೃಷ್ಣ ಸಾಂಬ್ರೇಕರ್, ಮಲ್ಲಿಕಾರ್ಜುನ ಗಟವಾಳಿಮಠ್, ಸಾಯಿ ಮಂದಿರ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಆಯ್ ಕೆ ತಳವಾರ, ಉಪಾಧ್ಯಕ್ಷರಾದ ರಮೇಶ ಕಮತಗೌಡರ, ಕಾರ್ಯದರ್ಶಿ ಜೆ ಆರ್ ರಜಪೂತ, ಖಜಾಂಚಿ ಬಸವರಾಜ ಜೀರಗೆ, ಕೆಆರ್ ಡಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೇಗುಣ್ಸಿ, ಪಿಡಿಓ ಬಸವಂತ ಕಡೆಮನಿ ಮೊದಲಾದವರು ಇದ್ದರು.

ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಶ್ರೀ ದುರ್ಗಾದೇವಿ ಮಂದಿರದ ಜೀರ್ಣೋದ್ಧಾರಕ್ಕಾಗಿ ಶಾಸಕರ ಅನುದಾನದಲ್ಲಿ 7 ಲಕ್ಷ ರೂ, ಮಂಜೂರು ಮಾಡಿದ್ದು ಮೊದಲನೇ ಕಂತಿನಲ್ಲಿ 3.90 ಲಕ್ಷ ರೂ,ಗಳ ಚೆಕ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಮಂದಿರದ ಟ್ರಸ್ಟ್ ಕಮೀಟಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ನಿವಾಸಿಗಳು, ಗ್ರಾಮ ಪಂಚಾಯತಿಯ ಸದಸ್ಯರಾದ ಗುಲಾಬಿ ಅ ಕೋಲಕಾರ, ಮಹಮ್ಮದ್ ಜಮಾದಾರ, ಪ್ರೇಮ ಕೋಲಕಾರ, ಮಲೀಕ್ ಮನಿಯಾರ, ಅಪ್ಸರ್ ಜಮಾದಾರ, ಗುಲಾಮರಸೂಲ್ ಮಕಾನದಾರ, ಹೊನಗೌಡ ಪಾಟೀಲ, ಪಾರ್ವತಿ ತಳವಾರ, ಪ್ರಕಾಶ ಕೋಲಕಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags: