Belagavi

ರೇಲ್ವೇ ಡಬಲ್ ಲೈನ್ ಮಾಡಿ ರೈತರಿಗೆ ತೊಂದರೆ ನೀಡದಿರಿ; ಜಿಲ್ಲಾಧಿಕಾರಿಗಳೊಂದಿಗೆ ಶಾ.ಸತೀಶ ಜಾರಕಿಹೊಳಿ ಸಭೆ

Share

ಬೆಳಗಾವಿಯ ಕಲಖಾಂಬ್, ಮುಚ್ಚಂಡಿ ಮತ್ತು ಅಷ್ಟೇ ಚಂದಗಡದಲ್ಲಿ ರೇಲ್ವೆ ಓವರ್ ಬ್ರಿಜ್ ಮತ್ತು ಡಬಲ್‌ಲೈನ್‌ನಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನ ಯಮಕನಮರ್ಡಿ ಶಾಸಕ ಸತೀಶ ಜಾರಕಿಹೋಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರ ಗಮನಕ್ಕೆ ತರಲಾಯಿತು.

ಶುಕ್ರವಾರದಂದು ಬೆಳಗಾವಿಯ ಕಲಖಾಂಬ್, ಮುಚ್ಚಂಡಿ ಮತ್ತು ಅಷ್ಟೇ ಚಂದಗಡದ ಗ್ರಾಮ ಪಂಚಾಯತ ಸದಸ್ಯರು ಯಮಕನಮರ್ಡಿ ಶಾಸಕ ಸತೀಶ ಜಾರಕಿಹೋಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರನ್ನ ಭೇಟಿಯಾಗಿ , ನೂತರ ಓವರ್ ಬ್ರಿಜ್ ಮತ್ತು ಡಬಲ್‌ಲೈನ್‌ನಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನ ಮನವರಿಕೆ ಮಾಡಿದರು. ಅಭಿವೃದ್ಧಿಯನ್ನ ರೈತರಿಗೆ ತೊಂದರೆಯಾಗದAತೆ ಮಾಡಲೂ ಸಲಹೆ ನೀಡಿದರು.
ಈ ಕುರಿತು ಬಾಳು ಕುರಬರ ಅವರು ಇನ್ ನ್ಯೂಸ್‌ಗೆ ಮಾಹಿತಿ ನೀಡಿದರು. ನೂತನ ರೇಲ್ವೇ ಟ್ರಾö್ಯಕ್ ನಿರ್ಮಾಣದಿಂದ ಕಲಖಾಂಬ್, ಮುಚ್ಚಂಡಿ ಮತ್ತು ಅಷ್ಟೇ ಚಂದಗಡದ ರೈತರು ತಮ್ಮ ಭೂಮಿಯನ್ನ ಕಳೆದುಕೊಳ್ಳುತ್ತಿದ್ದಾರೆ. ಶಾಸಕ ಸತೀಶ ಜಾರಕಿಹೊಳಿಯವರ ಗಮನಕ್ಕೂ ಇದನ್ನ ತಂದಿದ್ದು, ರೇಲ್ವೇ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ಇಲ್ಲಿ ನೂತನ ಓವರ್ ಬ್ರೀಜ್ ನಿರ್ಮಿಸಬಾರದು ಹಳೆ ಬ್ರಿಜ್‌ಗಳನ್ನ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.


ಶಾಸಕ ಸತೀಶ ಜಾರಕಿಹೋಳಿಯವರ ನೇತೃತ್ವದ ಗ್ರಾ ಪಂ ಸದಸ್ಯರು ಜಿಲ್ಲಾಧಿಕಾರಿಗಳನ್ನ ಭೇಟಿಯಾಗಿದ್ದು, ರೇಲ್ವೇ ಡಬಲ್ ಲೈನ್‌ನಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ನೂತನ ಓವರ್ ಬ್ರಿಜ್‌ನಿಂದ ರೈತರಿಗೆ ಸಮಸ್ಯೆಯಾಗದಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಲಖಾಂಬ್, ಮುಚ್ಚಂಡಿ ಮತ್ತು ಅಷ್ಟೇ ಚಂದಗಡದ ಗ್ರಾಮ ಪಂಚಾಯತ ಸದಸ್ಯರು ಹಾಜರಿದ್ಧರು.

Tags: