ರೈತರು ಕೃಷಿಯೊಂದಿಗೆ ಮನೋರಂಜನೆಗಾಗಿ ಎತ್ತಿನ ಬಂಡಿ ಓಟದ ಸ್ಪರ್ಧೆಗಾಗಿ ಎತ್ತುಗಳನ್ನು ಸಿದ್ಧಗೊಳಿಸ್ತಾರೆ. ವಿಜಯಪುರ ಜಿಲ್ಲೆಯಲ್ಲಿ ರೈತರು ಪೈಪೋಟಿಯಿಂದ ಎತ್ತುಗಳನ್ನು ಅಖಾಡಕ್ಕೆ ಇಳಿಸ್ತಾರೆ. ವಿಜಯಪುರ ಜಿಲ್ಲೆಯ ಜೋಡೆತ್ತುಗಳು ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಬಹುಮಾನ ಪಡೆಯೋದು ಫಿಕ್ಸ್. ಇದರಿಂದ ಜೋಡೆತ್ತಿನ ಬೇಡಿಕೆಯೂ ಲಕ್ಷ ಲಕ್ಷ ಏರಿಕೆ ಆಗುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಹೌದು…. ಉತ್ತರ ಕರ್ನಾಟಕದಲ್ಲಿ ಹಬ್ಬ, ಜಾತ್ರೆಗಳಲ್ಲಿ ಇದೀಗ ಎತ್ತಿನ ಬಂಡಿ ಓಟದ್ದೇ ಕಮಾಲ್… ರೈತರು ಕೃಷಿ ಚಟುವಟಿಕೆಯೊಂದಿಗೆ ಎತ್ತಿನ ಬಂಡಿ ಓಟದ ಸ್ಪರ್ಧೆಗಾಗಿ ಸಖತ್ ವರ್ಕೌಟ್ ಮಾಡಿಸ್ತಾರೆ. ವಿಜಯಪುರ ಜಿಲ್ಲೆಯ ಅತಾಲಟ್ಟಿ ಗ್ರಾಮದ ಮುತ್ತಪ್ಪ ಎಂಬುವರ ಜೋಡೆತ್ತುಗಳು ಎಲ್ಲಿಯೇ ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಹೋದ್ರೆ ಸಾಕು ಬಹುಮಾನ ಗಿಟ್ಟಿಸಿಕೊಂಡು ಬರೋದು ಫಿಕ್ಸ್. ವಿಜಯಪುರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯಲ್ಲಿ ನಡೆದ ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಒಂದನೇ ಸ್ಥಾನ, ಎರಡನೆ ಸ್ಥಾನ, ಇಲ್ಲವೆ ಕೊನೆಗೆ ತೃತೀಯ ಬಹುಮಾನ ಪಡೆದುಕೊಂಡು ಬಂದು ರೈತನ ಕೀರ್ತಿ ಹೆಚ್ಚಿಸೋದ್ರೊಂದಿಗೆ ಜೋಡೆತ್ತುಗಳ ಬೆಲೆ ಏರಿಕೆ ಆಗ್ತಿದೆ. ಬಹುಮಾನ ಗೆದ್ದಾಗ ರೈತರು ಎತ್ತು ಖರೀದಿಗಾಗಿ ಬೇಡಿಕೆ ಈಡ್ತಾರೆ. ಪ್ರತಿ ಎತ್ತಿಗೆ 1ಲಕ್ಷ,50 ಸಾವಿರದಿಂದ 2 ಲಕ್ಷ ಕೇಳಿದ್ರೂ ಮಾರಾಟ ಮಾಡಿಲ್ಲ ಅಂತಾರೆ ರೈತ ಮುತ್ತಪ್ಪ…
ಇನ್ನು ಜೋಡೆತ್ತುಗಳನ್ನು ದಷ್ಟ ಪುಷ್ಟವಾಗಿರಲು ರೈತ ಮುತ್ತಪ್ಪ ಹಿಂಡಿ, ಮೊಟ್ಟೆ, ಸೇರಿದಂತೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿದಿನ ಆರು ನೂರು ರೂಪಾಯಿ ಖರ್ಚು ಮಾಡ್ತಾರೆ. ಅಂದ್ರೆ ಪ್ರತಿತಿಂಗಳು 18 ಸಾವಿರ ಆಗುತ್ತೆ. ಜೋಡೆತ್ತುಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಿದ್ದಾರೆ. ಅಂದ್ರೆ ಜೋಡೆತ್ತುಗಳಿಗೆ ಖರ್ಚು ಮಾಡುವ ಹಣ ಮುಖ್ಯವಲ್ಲ. ನಮ್ಗೆ ಎತ್ತಿನ ಬಂಡಿ ಸ್ಪರ್ಧೆ ಓಟದಲ್ಲಿ ಬಹುಮಾನ ಗಿಟ್ಟಿಸಿಕೊಳ್ಳೋದು ಮುಖ್ಯ. ಎತ್ತು ಗೆದ್ದಾಗ ನಮ್ಗೆ ಎಲ್ಲಿಲ್ಲದ ಸಂಭ್ರಮವಿರುತ್ತೆ. ದುಡ್ಡು ಮನೆಯಲ್ಲಿಡೋದು, ಶ್ರೀಮಂತರಾಗಿರೋದು ಹೆಮ್ಮೆ ಅಲ್ಲ. ಮನೆ ಮುಂದೆ ಲಕ್ಷಾಂತರ ರೂಪಾಯಿ ಜೋಡೆತ್ತು ಕಟ್ಟೋದು ಹೆಮ್ಮೆ, ಬಸವಣ್ಣನಿಂದ ನಮಗೆ ಕೀರ್ತಿ ಹೆಚ್ಚಾಗುತ್ತದೆ. ಕೃಷಿ ಚಟುವಟಿಕೆಯೊಂದಿಗೆ ಎತ್ತಿನ ಬಂಡಿ ಓಟದ ಸ್ಪರ್ಧೆಗಾಗಿ ತಾಲೀಮು ಮಾಡ್ತೇವೆ ಅಂತಾರೆ ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಜೋಡೆತ್ತು ಓಡಿಸುವ ರೈತ…
ಒಟ್ಟಿನಲ್ಲಿ ವಿಜಯಪುರ ಜಿಲ್ಲೆಯ ಅತಾಲಟ್ಟಿ ಗ್ರಾಮದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆಗಾಗಿ ರೈತರು ಪೈಪೋಟಿಯಿಂದ ಸಿದ್ಧಗೊಳಿಸ್ತಾರೆ. ಅತಾಲಟ್ಟಿಯ ಜೋಡೆತ್ತು ಎಲ್ಲೆಡೆ ಬಹುಮಾನ ಗಿಟ್ಟಿಸಿಕೊಂಡು ಹವಾ ಸೃಷ್ಟಿ ಮಾಡಿ ಭಲೇ ಬಸವ ಎನ್ನಿಸಿಕೊಂಡಿವೆ…