ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅವರ ಕಚೇರಿ ಮೇಲೆ ಕುಡಿದ ಮತ್ತಿನಲ್ಲಿ ಓರ್ವ ವ್ಯಕ್ತಿ ಕಲ್ಲು ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿರುವ ಶಾಸಕ ಅನಿಲ್ ಬೆನಕೆ ಕಚೇರಿ ಇದಾಗಿದೆ. ಕಚೇರಿಯ ಕಿಟಕಿ ಗಾಜು ಪುಡಿ ಪುಡಿಯಾಗಿವೆ. ಪಾನಮತ್ತ ವ್ಯಕ್ತಿಯಿಂದ ಶಾಸಕರ ಕಚೇರಿ ಮೇಲೆ ಕಲ್ಲು ಎಸೆದಿದ್ದಾನೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.