Vijaypura

ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ್ರೂ ಆಶ್ಚರ್ಯ ಇಲ್ಲ: ಯತ್ನಾಳ್ ಹೊಸ ಬಾಂಬ್..!

Share

ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರ ಭವಿಷ್ಯ ಅಂಧಕಾರದತ್ತ ಹೋಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲಾ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.

ರಾಜ್ಯದಲ್ಲಿ ಬಿಜೆಪಿಯ ಶಾಸಕರು ಕಾಂಗ್ರೆಸ್‍ಗೆ ಬರಲಿದ್ದಾರೆ ಎಂಬ ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಹೇಳಿಕೆಗೆ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯ ಯಾರೂ ಅವರ ಟಚ್‍ನಲ್ಲಿಲ್ಲಾ, ಸಿದ್ದರಾಮಯ್ಯ ಹಾಗೂ ಡಿಕೆಶಿ ಮದ್ಯದ ಜಗಳ ಇದೆ. ಇಬ್ಬರೊಳಗೆ ಜಳಗ ಪ್ರಾರಂಭವಾಗಿ ಇಬ್ಬರಲ್ಲೇ ಒಬ್ಬರು ಬಿಜೆಪಿಗೆ ಬಂದರೆ ಆಶ್ಚರ್ಯವಿಲ್ಲ ಎಂದರು. ಇನ್ನು ಡಿಕೆಶಿ ರೈತರಿಗಾಗಿ, ಜನರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡಿಲ್ಲ. ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು. ಅಲ್ಲಿ ಡಿಕೆ ಶಿವಕುಮಾರ ಮುಂದಿನ ಸಿಎಂ ಎಂದು ಎಲ್ಲರೂ ಕೂಗಿದರು. ಮೇಕೆದಾಟಲಿಲ್ಲಾ, ಎಂದರೆ ಇದರ ಅರ್ಥ ಸಿದ್ದರಾಮಯ್ಯರನ್ನು ಮುಗಿಸೋದು. ಮೇಕೆದಾಟಲಿಲ್ಲಾ ಯಾಕಂದ್ರೆ ಅಲ್ಲಿ ಟಗರು ಇತ್ತು ಎಂದು ಯತ್ನಾಳ್ ತಮಾμÉ ಮಾಡಿದರು.

ಡಿಕೆಶಿ ಜೊತೆಗೆ ಸವದಿ ಒಳ ಒಪ್ಪಂದ ಆರೋಪಕ್ಕೆ ಯಾರೂ ಹಾಗಿಲ್ಲ, ಲಕ್ಷ್ಮಣ ಸವದಿ ಒಳ್ಳೆಯವರು, ಅವರು ಆ ರೀತಿ ಮಾಡೋದು ಸಾಧ್ಯವೆ ಇಲ್ಲ. ಲಕ್ಷ್ಮಣ ಸವದಿ ಕೆಳಮಟ್ಟಕ್ಕೆ ಇಳಿಯುವ ರಾಜಕಾರಣಿ ಅಲ್ಲ, ಸವದಿಯವರು ಸೋತರು ಅವರನ್ನ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಡಿಸಿಎಂ ಮಾಡಲಾಗಿತ್ತು, ಅವರ ಮೇಲೆ ಪಕ್ಷದ ಋಣ ಬಹಳ ಇದೆ. ಹೀಗಾಗಿ ಅವರು ಎಲ್ಲೂ ಹೋಗಲ್ಲ. ಚುನಾವಣೆ ಪರ್ವ ಇದೆಯಲ್ಲ ಈ ರೀತಿಯ ಸಂಶಯ, ಅಪಪ್ರಚಾರ, ಗಾಸಿಪ್‍ಗಳೆಲ್ಲ ನಡೆಯುತ್ತಿರುತ್ತವೆ ಎಂದರು.

ರಮೇಶ ಜಾರಕಿಹೊಳಿ ಹಾಗೂ ಯತ್ನಾಳ್ ಕೂಡಿ ಹೊಸ ಪಕ್ಷ ಕಟ್ಟುವ ಗುಮಾನಿಗೆ ಹೊಸ ಪಕ್ಷ ಎಲ್ಲಿ ಕಟ್ತಿರೀ ಎಂದು ಪ್ರಶ್ನಿಸಿ, ಈಗ ಇರೋ ದೇವೇಗೌಡರ ಪಕ್ಷವೇ ಮಕ್ಕೊಂಡಿದೆ. ನಮ್ಮ ಬಳಿ ಹಣ ಇದೆಯಾ..? ಎಲ್ಲಾದ್ರೂ ಲೂಟಿ ಮಾಡಿದ್ದೇವಾ..? ನಾವೆಲ್ಲ ಮೂಲ ಬಿಜೆಪಿಗರು, ಬಿಜೆಪಿ ಕಟ್ಟಿದವರು, ಇರೋ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟೋ ಚಟ ಇಲ್ಲ, ಶಕ್ತಿಯೂ ನಮ್ಮಲ್ಲಿ ಇಲ್ಲ, ನಾವು ರಮೇಶ ಜಾರಕಿಹೊಳಿ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ತರೋ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

Tags: