ಮಹಿಳೆಯರು ಯಾವಾಗಲೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾಗಿರುತ್ತಾರೆ. ಮನೆ,ಕುಟುಂಬ ಅಂತಾ ಸದಾ ಕೆಲಸದಲ್ಲಿ ಬಿಜಿಯಾರ್ಗಿತಾರೆ. ಅವ್ರಿಗೆ ವಿಶ್ರಾಂತಿ ಅನ್ನೋದು ಕಡಿಮೆ. ಹೀಗೆ ಬಿಜಿಯಾಗಿರೊ ಮಹಿಳೆಯರು ನಿನ್ನೆ ಸ್ವಲ್ಪ ರಿಲ್ಯಾಕ್ಸ್ ಆದರು. ಅದೂ ಕೂಡಾ ಆದಿತ್ಯನಿಗೆ ನಮಸ್ಕರಿಸುವ ಮೂಲಕ ದೇಶ ಸೇವೆಗೆ ಒಂದಷ್ಟು ಸಮಯ ಮೀಸಲಿಟ್ಟರು. ಗುಮ್ಮಟನಗರಿ ವಿಜಯಪುರದಲ್ಲಿ ಗಣರಾಜ್ಯೋತ್ಸವದ ಸಂಜೆ ನಡೆದ ಕೋಟಿ ಸೂರ್ಯ ನಮಸ್ಕಾರ ಕುರಿತು ಇಲ್ಲಿದೆ ಒಂದು ವರದಿ…
ಕೊರೋನಾ ಮೂರನೇ ಅಲೆ ಅಬ್ಬರಿಸುತ್ತಿದೆ. ಇಂತಹುದರಲ್ಲೆ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಗಿದೆ. ಇಂತಹ ಮಹಾಮಾರಿ ಆತಂಕದಲ್ಲೇ ಸ್ವಾತಂತ್ರ್ಯ ದಿವಸದ 75 ನೇ ಅಮೃತಮಹೋತ್ಸವದಲ್ಲಿದ್ದೇವೆ. ಗಣರಾಜ್ಯೋತ್ಸವ ದ ಚುಮುಚುಮು ಸಂಜೆಯಲ್ಲಿ ವಿಜಯಪುರ ನಗರದಲ್ಲಿ ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಗಣರಾ ಜ್ಯೋತ್ಸವದ ಆಚರಣೆಯನ್ನು ಜೊತೆಗೆ 75 ನೆಯ ಸ್ವತಂತ್ರ ದಿವಸದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯನಮಸ್ಕಾರ ಅಭಿಯಾನವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಲು ಐದು ಬಾರಿ ಸೂರ್ಯ ನಮಸ್ಕಾರ ಮಾಡಿ ನಮ್ಮ ಸೇವೆಯನ್ನು ದೇಶಕ್ಕಾಗಿ ಸಮರ್ಪಿಸುವ ದೃಷ್ಟಿಯಿಂದ ನಗರದ ಗ್ಯಾಂಗ್ ಬಾವಡಿಯ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ನೂರಾರು ಮಹಿಳೆಯರು ಬಿಳಿ ಸಮವಸ್ತ್ರ ಹಾಗೂ ಮಾಸ್ಕ್ ಧರಿಸಿಕೊಂಡು ಸೂರ್ಯ ನಮಸ್ಕಾರದಲ್ಲಿ ಭಾಗಿಯಾದರು. ಯೋಗ ಋಷಿ ರಾಮದೇವ್ ಬಾಬಾ ಜಿ ಅವರ ಜೊತೆ ನೇರಪ್ರಸಾರದಲ್ಲಿ ಸೂರ್ಯನಮಸ್ಕಾರವನ್ನು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಭಕ್ತಿ ಮೆರೆದರು.
ಇನ್ನೂ ಈ ಕೋಟಿ ಸೂರ್ಯನಮಸ್ಕಾರದಲ್ಲಿ ವಿವಿಧ ಕಾಲೊನಿ ಮಹಿಳೆಯರು ಭಾಗಿಯಾಗಿದ್ದರು. ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ ಮಾಡಲಾಯಿತು. ಸೂರ್ಯ ನಮಸ್ಕಾರವು ಯೋಗಾಸನದ 10 ಭಂಗಿ ಒಳಗೊಂಡಿತ್ತು. ಅಲ್ಲದೇ ಕುಟುಂಬಗಳ ಶಕ್ತಿಯಾಗಿರುವ ಮಹಿಳೆಯರ ಆರೋಗ್ಯ ವೃದ್ದಿ, ಮನೋಬಲ ಹೆಚ್ಚಿಸಲು ಸೂರ್ಯ ನಮಸ್ಕಾರ ಮಾಡಿಸಲಾಯಿತು. ಇನ್ನೂ ಕೊರೋನಾ ಗೆ ಯೋಗ ರಾಮಬಾಣವಾಗಿದೆ. ನಾವು ಪ್ರತಿನಿತ್ಯ ಯೋಗ ಮಾಡ್ತಿದ್ದಿವಿ ಅದ್ರಿಂದ ನಮಗೆ ಕೊರೊನಾ ಸೋಂಕು ಬಂದ್ರೂ ಕೂಡ ನಮಗೆ ಯಾವುದೇ ತೊಂದರೆಯಾಗಿಲ್ಲಾ ಆದ್ದರಿಂದ ನಾವು ಯಾವಾಗಲೂ ಯೋಗ ಮಾಡ್ತಿದ್ದಿವಿ. ಇವತ್ತು ಕಾಲನಿ ಮಹಿಳೆಯರ ಜೊತೆ ಯೋಗ ಮಾಡಿ ಖುಷಿ ಆಗಿದೆ ಎನ್ನುತ್ತಾರೆ ಈ ಸೂರ್ಯನಮಸ್ಕಾರದಲ್ಲಿ ಭಾಗಿಯಾದವರು
ಒಟ್ನಲ್ಲಿ ಗಣರಾಜ್ಯೋತ್ಸವ ದಿನದಂದು ಮಹಿಳೆಯರು ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿ ರಿಲ್ಯಾಕ್ಸ್ ಮೂಢ್ ನಲ್ಲಿ ಯೋಗಾ ಮಾಡುವ ಮೂಲಕ ಆರೋಗ್ಯ ವೃದ್ದಿ, ಹಾಗೂ ಮನೊಬಲ ವೃದ್ದಿಗೆ ಪಣತೊಟ್ಟರು.