Accident

ಹರಿತ ಆಯುಧದಿಂದ ಪತ್ನಿ ಕೊಂದ ಪಾಪಿ ಪತಿ

Share

ಪತ್ನಿಯನ್ನು ಪಾಪಿ ಪತಿಯೊಬ್ಬ ಹರಿತವಾದ ಆಯುಧದಿಂದ ಪತ್ನಿಗೆ ತಿವಿದು ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ. ಶೀಲವಂತಿ ಗುರುಬಾಳ ಕನ್ನಾಳ ಕೊಲೆಯಾದ ಪತ್ನಿಯಾಗಿದ್ದಯ ಪತಿ ಗುರುಬಾಳ ತಿಪ್ಪಣ್ಣ ಕನ್ನಾಳನಿಂದ ಹೇಯ ಕೃತ್ಯ ನಡೆದಿದೆ.

ಗಂಡನ ಕುಡಿತದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು‌. ಹೆಂಡತಿಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಗುರುಬಾಳನಿಗೆ ಪತ್ನಿ ಕುಡಿತ ಬಿಟ್ಟರೆ ಮನೆಗೆ ಬರುವೆ ಎಂದು ಪತ್ನಿ ಹೇಳಿದ್ದಳು‌. ಪತ್ನಿಯನ್ನು ಕೊಲೆ ಮಾಡಿ ಗಂಡ ಗುರುಬಾಳ ಪರಾರಿಯಾಗಿದ್ದಾನೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags: