ವಯಸ್ಸಾದ ಹಿರಿಯರಿಬ್ಬರು ಮೆಟ್ಟಿಲುಗಳನ್ನು ಏರಲು ಆಗದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಶಾಸಕರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲ ಇವರ ಆಫೀಸಿನ ಗೇಟ್ ಮುಂದೆ ಕುಳಿತಿದ್ದನ್ನು ನೋಡಿದ ಎಂ.ಬಿ.ಪಾಟೀಲರ ಆಪ್ತ ಸಹಾಯಕರಾದ ಸಂತೋಷ್ ಲೋಕುರ ಹಾಗೂ ಶ್ರೀಕಾಂತ್ ಜೆಜೆ ಇವರಿಬ್ಬರು ಅಜ್ಜಂದಿರು ಕುಳಿತಲ್ಲಿಯೇ ಹೋಗಿ ಗೇಟ್ ಮುಂದೆ ಕುಳಿತು ಅವರ ಸಮಸ್ಯೆಗೆ ಸ್ಪಂದಿಸಿ ಪರಿಹರಿಸಿದರು. ಬಬಲೇಶ್ವರ ಶಾಸಕ ಎಂಬಿ ಪಾಟೀಲ ಯಾವ ರೀತಿ ಜನರ ಕಷ್ಟಕ್ಕೆ ಹೇಗೆ ಸ್ಪಂದಿಸುತ್ತಾರೆಯೋ ಅದೇ ರೀತಿ ಅವರ ಮಾರ್ಗದರ್ಶನದಲ್ಲಿ ಕಚೇರಿಯಲ್ಲಿ ಆಪ್ತ ಸಹಾಯಕರು, ಕಚೇರಿ ಸಿಬ್ಬಂದಿಗಳು ಸ್ಪಂದಿಸಿದ್ದು ಶ್ಲಾಘನೆಗೆ ಪಾತ್ರವಾಗಿದೆ.