DEATH

ಬೈಕ್ ಸೈಕಲ್ ಮುಖಾಮುಖಿ: ಒಬ್ಬನ ಸಾವು: ಇಬ್ಬರಿಗೆ ಗಾಯ

Share

ವಿಜಯಪುರ : ಬೈಕ್ ಹಾಗೂ ಸೈಕಲ್ ಮಧ್ಯೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತೆಲಗಿ ಗ್ರಾಮದ ಬಳಿ ನಡೆದಿದೆ. 30 ವರ್ಷದ ಬಾಬಾಜಿ ಮೃತಪಟ್ಟಿರುವ ದುರ್ದೈವಿ ಯಾಗಿದ್ದಾನೆ.

ಬೈಕ್‌ನಲ್ಲಿದ ಮತ್ತೋರ್ವ ಹಾಗೂ ಸೈಕಲ್ ಸವಾರ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ದೂರು ದಾಖಲಾಗಿದೆ.

Tags: