16 ಅಲ್ಲ 25 ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆ ತರುವ ಶಕ್ತಿ ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿಗೆ ಇದೆ. ಅಷ್ಟೇ ಅಲ್ಲದೇ 2023ರ ಚುನಾವಣೆಯಲ್ಲಿ ಮತ್ತೆ 25 ಶಾಸಕರನ್ನು ಗೆಲ್ಲಿಸುವ ಶಕ್ತಿಯೂ ಇದೆ. ಇವರು ಬೆಳಗಾವಿ ಜಿಲ್ಲೆಗೆ ಸಿಮೀತ ಇಲ್ಲ, ಇಡೀ ರಾಜ್ಯಕ್ಕೆ ಸಿಮೀತವಾಗಿದ್ದಾರೆ. ಇವರನ್ನು ಬಿಜೆಪಿಯವರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎನ್ನುವ ಮೂಲಕ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಸಹೋದರರ ಪರ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ.
ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂಎಲ್‍ಸಿ ಲಖನ್ ಜಾರಕಿಹೊಳಿ ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ಮಾಡಲೂ ಸಾಧ್ಯವೇ ಇಲ್ಲ. ಅವರಿಗೆ ಸ್ವಂತ ಬಲವಿದೆ. ಗೋಕಾಕ್ ಮತ್ತು ಅರಭಾವಿ ಕ್ಷೇತ್ರದಲ್ಲಿ ಅವರದೇಯಾದ 1 ಲಕ್ಷ ಮತದಾರರಿದ್ದಾರೆ. ಅವರ ವಿರುದ್ಧ ಏನೂ ಮಾಡಲು ಆಗುವುದಿಲ್ಲ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಗೆದ್ದೇ ಗೆಲ್ಲುತ್ತಾರೆ ಎಂದರು.
ಸಿದ್ದರಾಮಯ್ಯ ನಿಮಗೆ ಕರೆ ಮಾಡಿ ಕಾಂಗ್ರೆಸ್‍ಗೆ ಬರುವಂತೆ ಆಹ್ವಾನ ಮಾಡಿರುವ ಕುರಿತು ಪ್ರತಿಕ್ರಯಿಸಿದ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ನಾನು ಸೇರುವುದಿಲ್ಲ. ಆದರೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ನಾಯಕರು, ನಮ್ಮ ಗುರುಗಳು.
ಈಗಾಗಲೇ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಸ್ವಯಂಘೋಷಿತ ನಾಯಕರಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಿದೆ.
ಈಗ ಪಕ್ಷದಲ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‍ಗೆ ಹೋಗುವ ಪ್ರಮೇಯವೇ ಇಲ್ಲ. ಇನ್ನು ಬಿಜೆಪಿಯವರು ಯಾರೂ ಕೂಡ ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಥಣಿ ಹಾಗೂ ಬೆಳಗಾವಿ ಜಿಲ್ಲೆಯ ನಾಯಕರು ಸೇರಿ ಕುತಂತ್ರ ಮಾಡಿ, ಬಿಜೆಪಿ ಸರ್ಕಾರ ಬಲಿ ಕೊಡುತ್ತಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ ಉನ್ನತ ಹುದ್ದೆ ಅನುಭವಿಸಿ, ಈಗ ಮತ್ತೆ ಏನಾದ್ರೂ ಅಧಿಕಾರ ಸಿಗಲಿ ಎಂಬ ಕುತಂತ್ರದಿಂದ ಈ ತರಹ ಸಭೆ ಮಾಡುವುದು ಒಂದು ಫಾರ್ಮುಲಾ ಎಂದು ಕಿಡಿಕಾರಿದರು.
ಬಿಜೆಪಿ ರಹಸ್ಯ ಸಭೆ ಬಗ್ಗೆ ಮಾತನಾಡಿ ಲಖನ್ ಉಮೇಶ ಕತ್ತಿ ಅವರೇ ಹೇಳಿದ್ದಾರೆ ನಾವು ಪಕ್ಷದ ಸಂಘಟನೆ ಹಾಗೂ ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಮಿಟಿಂಗ್ ಮಾಡಿದ್ದೇವೆ. ನಾವು ಯಾರನ್ನೂ ಹೊರಗೆ ಇಟ್ಟಿಲ್ಲ ಎಂದು ಹೇಳಿದ್ದಾರೆ. ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ರಮೇಶ, ಬಾಲಚಂದ್ರ ಕೊಡುಗೆ ಇದೆ. ಈಗ ಮೊನ್ನೆ ಅವರ ತಪ್ಪು ನಿರ್ಧಾರದಿಂದ ಎಂಎಲ್‍ಸಿ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಅದನ್ನು ಬೇರೆ ಅವರ ತಲೆಗೆ ಕಟ್ಟಲು ಹೋಗುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಇದನ್ನು ಗಮನಿಸುತ್ತಿದ್ದಾರೆ. ಇನ್ನು ಪಾರ್ಟಿ ಆಫೀಸ್‍ನಲ್ಲಿ ಸಭೆಯಾದ್ರೆ ಅದು ಅಧಿಕೃತ ಪಕ್ಷದ ಸಭೆ ಆಗುತ್ತದೆ. ಯಾರದೋ ಮನೆಯಲ್ಲಿ, ಅಲ್ಲೆಲ್ಲಿಯೂ ಆದರೆ ಸಭೆ ಆದರೆ ಅದು ಅಧಿಕೃತ ಅಲ್ಲ ಎಂಬುದು ಬಾಲಚಂದ್ರ ಜಾರಕಿಹೊಳಿ ಅವರ ಅಭಿಪ್ರಾಯ ಆಗಿದೆ ಎಂದರು.
ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಸರಿಯಾಗಿ ಬಳಸಿಕೊಂಡರೆ ಮುಂದೆ 2023ರಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಗ್ಯಾರಂಟಿ. 16 ಜನ ಇಲ್ಲ 25 ಜನರನ್ನು ಕರೆ ತರುವ ಶಕ್ತಿ ಇವರಿಗಿದೆ. ಇವರನ್ನು ದೂರ ಇಟ್ಟು ಚುನಾವಣೆ ಮಾಡಲು ಹೋದರೆ ಒಬ್ಬರು, ಇಬ್ಬರು ಅಷ್ಟೇ ಬರುತ್ತಾರೆ. ಹೀಗಾಗಿ ಬಿಜೆಪಿ ಸರ್ಕಾರ ಬರಲು ರಮೇಶ ಹಾಗೂ ಬಾಲಚಂದ್ರ ಅವರೇ ಕಾರಣ ಹೀಗಾಗಿ ಅವರನ್ನು ಬಿಜೆಪಿಯವರು ಬಳಕೆ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ, ಕಾಂಗ್ರೆಸ್‍ನ ಯಾರೇ ಷಡ್ಯಂತ್ರ ಮಾಡಿದ್ರೂ ಏನೂ ಮಾಡೋದಿಕ್ಕೆ ಆಗೋದಿಲ್ಲ. ಏನು ಮಾಡಿದ್ರೂ ಗೋಕಾಕ್‍ಗೆ ಬಂದೇ ಅವರು ಮಾಡಬೇಕು. ಆದರೆ ಅವರಿಗೆ ಗೋಕಾಕ್ ಮತಕ್ಷೇತ್ರದ ಮತದಾರರ ಶ್ರೀರಕ್ಷೆ ಇದೆ. ದೇವರ ಆಶೀರ್ವಾದವಿದೆ. ಅವರಿಗೆ ಎಷ್ಟು ಕಷ್ಟ ಕೊಟ್ಟರೂ ಅದರಿಂದ ಮತ್ತಷ್ಟು ಗಟ್ಟಿಯಾಗುತ್ತಾರೆ ಎಂದರು.
ರಮೇಶ ಜಾರಕಿಹೊಳಿ ಅವರನ್ನು ಸರಿಯಾಗಿ ಬಳಸಿಕೊಂಡರೆ 16 ಶಾಸಕರಲ್ಲ 25 ಶಾಸಕರು ಬಿಜೆಪಿಗೆ ಬರುತ್ತಾರೆ.
ಅದನ್ನು ಬಿಟ್ಟು ಸೋತವರನ್ನು ಉಪಾಧ್ಯಕ್ಷ, ಡಿಸಿಎಂ ಮಾಡೋದು ಮಾಡಿದ್ರೆ ಸ್ವಂತ ಬ್ಯಾಲನ್ಸ ಸೀಟ್ ಮಾಡುತ್ತಾರೆ ಹೊರತು ಪಕ್ಷಕ್ಕೆ ಶಕ್ತಿ ತುಂಬುವವರಲ್ಲ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ಗಮನಿಸಿ ರಮೇಶ, ಬಾಲಚಂದ್ರ ಅವರಿಗೆ ಹೆಚ್ಚಿನ ಆಧ್ಯತೆ ಕೊಟ್ಟರೆ ಒಳ್ಳೆಯದಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಈಗ ಎಲ್ಲಿಯೂ ಶಕ್ತಿ ಇಲ್ಲ. ಕಾಂಗ್ರೆಸ್ ಪಕ್ಷದ ಶಕ್ತಿ ಈಗ ಕಡಿಮೆಯಾಗಿದೆ. ನಾವು ಕೂಡ ಕಾಂಗ್ರೆಸ್ ಪಕ್ಷದಲ್ಲಿಯೇ ಮೊದಲು ಇದ್ದವರು. ಬೆಂಗಳೂರಿನ ನಾಯಕರು ಮತ್ತು ಬೆಳಗಾವಿ ಅವರನ್ನು ಸ್ವಯಂ ಘೋಷಿತ ನಾಯಕರನ್ನಾಗಿ ಮಾಡಿದ್ದರಿಂದ ಅದಕ್ಕಾಗಿ ರಮೇಶ, ಬಾಲಚಂದ್ರ ಅವರಿಗೆ ಸರಿಯಾಗಿ ಬಳಕೆ ಮಾಡಿಕೊಂಡರೆ ಬಿಜೆಪಿಗೆ ಇನ್ನು ಹೆಚ್ಚಿನ ಶಕ್ತಿ ಬರುತ್ತದೆ ಎಂದರು.
ಸಮ್ಮಿಶ್ರ ಸರ್ಕಾರ ಸರ್ಕಾರ ಪತನ ಆದಾಗ ಡಿ.ಕೆ.ಶಿವಕುಮಾರ್ ಅವರೇ ನಿಮ್ಹಾನ್ಸಗೆ ಹೋಗಬೇಕಿತ್ತು. ಇವರ ಕುತಂತ್ರದಿಂದ ಪಾಪ ಕುಮಾರಸ್ವಾಮಿ ಅವರ ಪುತ್ರ ಮಂಡ್ಯದಲ್ಲಿ ಸೋತರು, ಅವರ ತಂದೆ ತುಮಕೂರಿನಲ್ಲಿ ಸೋತರು ಎಂದು ಡಿಕೆಶಿ ವಿರುದ್ಧ ಲಖನ್ ಕಿಡಿಕಾರಿದರು.