ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ರಚನೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿ ಚುನಾವಣೆ 6 ತಿಂಗಳು ಇರೋವಾಗ ಸಂಪುಟ ಪುನರ್ ರಚನೆ ಮಾಡಿದ್ರೆ ನಾವ್ಯಾರು ಮಂತ್ರಿ ಆಗೋಲ್ಲ ಎನ್ನೋ ಮೂಲಕ ಪರೋಕ್ಷವಾಗಿ ಸಂಪುಟ ವಿಳಂಬಕ್ಕೆ ಆಕ್ರೋಶ ಹೊರಹಾಕಿದ್ರು.
ಆದಷ್ಟು ಬೇಗ ಸಂಪುಟ ಪುನರ್ರಚನೆ ವಿಶ್ವಾಸ ಇದೆ ಎಂದರು. ಸಿಎಂ ಬೊಮ್ಮಾಯಿಯವ್ರು ಪ್ರಧಾನಿಗಳನ್ನ ಭೇಟಿ ಮಾಡಬೇಕು, ಪಂಚರಾಜ್ಯ ಚುನಾವಣೆ ಇದೆ. ನಾಳೆ ಸಿಎಂ ದೆಹಲಿಗೆ ಹೊರಟಿದ್ದಾರೆ. ಚರ್ಚೆ ನಡೆಸಿ ಮಾಡಬಹುದು, ಯಾವಾಗ ಆಗುತ್ತೋ ಆಗಲಿ, ತಡವಾಗಿ 6 ತಿಂಗಳ ಮೇಲೆ ಕೊಡೊದಾದ್ರೆ ನಾವು ಮಂತ್ರಿ ಆಗಲ್ಲ ಎಂದು ಸ್ಪಷ್ಟಪಡಿಸಿದರು.