State

ಪ್ರಥಮ ದರ್ಜೆ ಸರ್ಕಾರಿ ಕಾಲೇಜುಗಳಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್‍ಗೆ ಕ್ಯಾಬಿನೇಟ್ ಅಸ್ತು: ಮಾಧುಸ್ವಾಮಿ ಮಾಹಿತಿ

Share

ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿರುವ ಮೂರು ನಿಗಮಗಳನ್ನು ವಿಲೀನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಅರಣ್ಯ ಅಭಿವೃದ್ಧಿ ನಿಗಮ, ಅರಣ್ಯ ಕೈಗಾರಿಕಾ ನಿಗಮ ಮತ್ತು ಗೇರು ಅಭಿವೃದ್ಧಿ ನಿಗಮಗಳನ್ನು ವಿಲೀನಗೊಳಿಸಲು ಸರ್ಕಾರವು ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಚಿವ ಸಂಪುಟ ಸಭೆಯಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ವಿದ್ಯಾವಿಕಾಸ ಕಾರ್ಯಕ್ರಮದ ಸಮವಸ್ತ್ರಕ್ಕೆ 73.63 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ ಲೋಕಾಯುಕ್ತದಲ್ಲಿ ಇನ್ನೂ ಸ್ವಲ್ಪ ದಿನ ಮೂರ್ನಾಲ್ಕು ಸಿಬ್ಬಂದಿಯನ್ನು ಮುಂದುವರಿಸುತ್ತೇವೆ. ಸನ್ನಡತೆ ಅಧಾರದಲ್ಲಿ 166 ಕೈದಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ. ಚಾಮುಂಡೇಶ್ವರಿ ದೇಗುಲದ ಮೂಲಸೌಕರ್ಯಕ್ಕೆ 92.81 ರೂ. ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಇನ್ನು ಕರ್ನಾಟದಲ್ಲಿ ಸ್ವಾಮಿತ್ವ ಯೋಜನೆಗೆ 287 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಗ್ರಾಮೀಣ ವಸತಿ ಹಕ್ಕು, ಕೃಷಿ ಭೂಮಿಯ ಹಕ್ಕುಗಳ ದಾಖಲೆಗಳನ್ನು ಹಾಗೂ ಪಟ್ಟಣ, ನಗರದ ಆಸ್ತಿಗಳ ದಾಖಲೆ ಸಿದ್ಧಪಡಿಸಲು ಸಮೀಕ್ಷೆ ನೆರವಾಗಲಿದೆ. ಅದೇ ರೀತಿ ಕೆಟಿಪಿಪಿ ಕಾಯ್ದೆಯ ಅನ್ವಯ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ 287 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುದಾನ ಸಿಕ್ಕಿದೆ ಎಂದು ತಿಳಿಸಿದರು.

ಶಿವರಾಮ ಕಾರಂತ ಬಡಾವಣೆಗಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 400 ಎಕರೆ ಜಮೀನು ನಿಗದಿಪಡಿಸಲಾಗಿದೆ. ಈ ಪೈಕಿ 66.17 ಎಕರೆ ಹಸ್ತಾಂತರ ಮಾಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ವಿಸ್ತರಿಸಲಾಗುವುದು. 32 ಗ್ರಾಮಗಳಿಗೆ ವಿಸ್ತರಿಸುವ ಈ ಯೋಜನೆಗೆ 22 ಕೋಟಿ ರೂಪಾಯಿಯ ಅಂದಾಜು ಮೊತ್ತ ನಿಗದಿಪಡಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ವಸತಿ ಬಡಾವಣೆಗೆ 30.50 ಕೋಟಿ ಮೊತ್ತದ ವಿಸ್ತøತ ಯೋಜನಾ ವರದಿ ಸಿದ್ಧಪಡಿಸಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಹುಬ್ಬಳ್ಳಿ-ಧಾರವಾಡ ಆರ್ಯಭಟ ಐಟಿ ಪಾರ್ಕ್‍ನಲ್ಲಿ ಬಾಕಿ ಉಳಿದ 3 ಎಕರೆ ಭೂಮಿಯನ್ನು 3 ಐಟಿ-ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ. 400 ಪಶುವೈದ್ಯರ ಇಲಾಖಾ ನೇಮಕಾತಿಗೆ ಅನುಮತಿ ನೀಡಲಾಗಿದೆ. ಸಂಪುಟ ಸಭೆಯಲ್ಲಿ ಕೊವಿಡ್ ನಿಯಮಗಳ ಬಗ್ಗೆ ಚರ್ಚೆ ನಡೆದಿಲ್ಲ. ಇನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ, ಅಂದರೆ 2022-2023ರಲ್ಲಿ 60 ಲಕ್ಷ ಮೀಟರ್ ಬಟ್ಟೆ ಖರೀದಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಒದಗಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ವಿಚಾರ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

Tags: