ಬೆಳಗಾವಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಆಂಜನೇಯ ನಗರದ ಜೆ. ಬಿ.ಸ್ಪೋಟ್ರ್ಸ್ ಫೌಂಡೇಶನ್ ನ ಸಭಾಭವನದಲ್ಲಿ ವಿಶೇಷ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಬೆಳಗಾವಿ ನಗರದ ‘ಕ್ರಾಂತಿ ಮಹಿಳಾ ಮಂಡಳ ‘ದ ಮತ್ತು ‘ಉಮಾ ಸಂಗೀತ ಪ್ರತಿμÁ್ಠನ ‘ವತಿಯಿಂದ ಬೆಳಗಾವಿಯ ಆಂಜನೇಯ ನಗರದ ಜೆ. ಬಿ.ಸ್ಪೋಟ್ರ್ಸ್ ಫೌಂಡೇಶನ್ ನ ಸಭಾಭವನದಲ್ಲಿ ವಿಶೇಷ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಎರಡು ಸಂಸ್ಥೆಗಳ ಮುಖ್ಯಸ್ಥರು ಮತ್ತು ಸದಸ್ಯರಿಂದ ಭಾರತಮಾತೆಯ ಫೆÇೀಟೋ ಪೂಜೆ ಮಾಡಲಾಯಿತು.ರಾಷ್ಟ್ರಗೀತೆ ಹಾಡಿ ವಿದ್ಯುಕ್ತವಾಗಿ ಮಕ್ಕಳಿಂದ ಧ್ವಜ ಹಾರಿಸುವದರ ಗಣರಾಜ್ಯೋತ್ಸವ ಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ’ ಕ್ರಾಂತಿ ಮಹಿಳಾ ಮಂಡಳ’ ಮತ್ತು ‘ಉಮಾ ಸಂಗೀತ ಪ್ರತಿμÁ್ಠನ’ದ ಅಧ್ಯಕ್ಷೆ ಮಂಗಲಾ ಮಠದ ಪ್ರತಿμÁ್ಠನ ವತಿಯಿಂದ ಬೆಳಗಾವಿಯ ಅಂಗವಿಕಲರ ಸೇವೆಗಾಗಿ ಶ್ರಮಿಸುತ್ತಿರುವ ಅಂಗವಿಕಲರಿಂದ ನಡೆಸಲಾಗುತ್ತಿರುವ ‘ವಿಶ್ವಾಸ ಫೌಂಡೇಶನ್ ಸ್ವ ಉದ್ಯೋಗ ಸಂಸ್ಥೆ’ಗೆ ಸುಮಾರು 80 ಸಾವಿರ ಬೆಲೆಬಾಳುವ ಕಂಪ್ಯೂಟರ್ ಪ್ರಿಂಟರ್ ಮತ್ತು ಇತರೆ ಸಾಮಗ್ರಿಗಳನ್ನು ವಿಶ್ವಾಸ ಫೌಂಡೇಶನ್ ನ ಸಂಸ್ಥಾಪಕ ಕಾರ್ಯದರ್ಶಿ ಬಸಪ್ಪ ಸುಣಧೋಳಿ ಅವರಿಗೆ ಹಸ್ತಾಂತರಿಸಿ ನಮ್ಮ ಪ್ರತಿμÁ್ಠನ ಅನೇಕ ವರ್ಷಗಳಿಂದ ಕೈಲಾದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ವಿವಿಧ ಸಂಘ ಸಂಸ್ಥೆಗಳಿಗೆ ದೇಣಿಗೆ, ಕೋವಿಡ್ ಸಂದರ್ಭದಲ್ಲಿ ಸಹಿತ ನಿರ್ಗತಿಕರಿಗೆ ನೆರವು, ವಿಶೇಷ ಅಗತ್ಯತೆಯುಳ್ಳವರಿಗೆ ಕೈಲಾದ ಸಹಾಯ, ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾವಂತ ಮಕ್ಕಳಿಗೆ ನೆರವು ಹೀಗೆ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ. ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ವಿಶ್ವಾಸ್ ಪೌಂಡೇಶನ್ ರವರು ಸೇವಾಮನೋಭಾವ ಮತ್ತು ಅವರ ಸ್ವಂತ ದುಡಿಯಬೇಕೆಂಬ ಛಲ ಗಮನಿಸಿ ಅವರ ಅನುಕೂಲಕ್ಕೆ ನಮ್ಮ ಅಲ್ಪ ದೇಣಿಗೆಯನ್ನು ಸಮರ್ಪಿಸಿ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠ ಶೇಗುಣಸಿಯ ಶ್ರೀ ಮ. ನಿ. ಪ್ರ.ಮಹಾಂತ ದೇವರು ಮಾತನಾಡಿ ಕ್ರಾಂತಿ ಮಹಿಳಾ ಮಂಡಲ ಮತ್ತು ಉಮಾ ಸಂಗೀತ ಪ್ರತಿμÁ್ಠನದ ಜನಹಿತ ಕಾರ್ಯಗಳು ನಿಜಕ್ಕೂ ಮಾದರಿಯಾಗಿವೆ. ಇನ್ನೊಬ್ಬರ ಹಿತಕ್ಕಾಗಿ ಕೆಲಸ ಮಾಡುವ ಅವರ ತುಡಿತ ಮತ್ತು ಸೇವಾ ಮನೋಭಾವ ನಿಜಕ್ಕೂ ಅನುಕರಣೀಯ. ಇಂತಹ ಸಮಾಜಮುಖೀ ಕಾರ್ಯಗಳು ಇತರರಿಂದಲೂ ನಡೆದು ಭಾರತ ವಿಶ್ವ ಗುರು ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸಬೇಕು. ನಿಜಕ್ಕೂ ಪ್ರತಿμÁ್ಠನದ ಈ ರೀತಿಯ ಗಣರಾಜ್ಯೋತ್ಸವ ಆಚರಣೆ ಎಲ್ಲರಿಗೂ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಉಮಾ ಸಂಗೀತ ಶಾಲೆಯ ವಿದ್ಯಾರ್ಥಿನಿಯರಾದ ಮಾನ್ಯಾ, ತನ್ವಿ ಮತ್ತು ತಂಡದವರು ದೇಶಭಕ್ತಿ ಗೀತೆಗಳಿಗೆ ಆಕರ್ಷಕವಾದ ನೃತ್ಯವನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಜೆ. ಬಿ. ಸ್ಪೋಟ್ರ್ಸ್ ಫೌಂಡೇಶನ್ ನ ಸಂತೋಷ ಜೋಶಿ, ವಿಶ್ವಾಸ ಫೌಂಡೇಶನ್ ನ ಸದಸ್ಯರು, ಡಾ . ಕೆ.ಎಸ್. ಗುಡಗನಟ್ಟಿ, ವಿಶಾರದ ನೃತ್ಯ ಶಾಲೆಯ ಪ್ರೇಮಾ ಉಪಾಧ್ಯೆ, ಶೋಭಾ ಕಾಡನ್ನವರ, ಮೈನಾ ಕುಲಕರ್ಣಿ, ಭಾರತಿ ಕೆರೂರ,ಆಶಾ ಹೊಸಮನಿ,ರತ್ನಾ ಗುಡಗನಟ್ಟಿ ಸೇರಿದಂತೆ ಪ್ರತಿμÁ್ಠನದ ಸದಸ್ಯರು ಮತ್ತು ವಿದ್ಯಾರ್ಥಿನಿಯರ ಪಾಲಕರು ಉಪಸ್ಥಿತರಿದ್ದರು.