ಬೆಳಗಾವಿಯ ಬಿ.ಎ ಸನದಿ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಕುಟುಂಬ ನಾಮಗಳು ಸ್ವರೂಪ ಹಾಗೂ ವಿಸ್ಲೇಷಣೆ ಎಂಬ ಕೃತಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ಶಿವಬಸವ ನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ದಿವ್ಯ ಸಾನಿಧ್ಯವನ್ನು ತೋಂಟದಾರ್ಯಮಠ ಗದಗ ಡಂಬಳದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳುವ ವಹಿಸಿದ್ದರು. ಈ ವೇಳೆ ವೇದಿಕೆ ಮೇಲಿದ್ದ ಗಣ್ಯರು ಪ್ರೋ. ಬಿ.ಎಫ್. ಕಲ್ಲಣ್ಣವರ್ ಬರೆದ “ಕುಟುಂಬ ನಾಮಗಳು: ಸ್ವರೂಪ ಹಾಗೂ ವಿಸ್ಲೇಷಣೆ” ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಸ್.ಎಸ್ ಅಂಗಡಿ, ಈ ಕೃತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕೃತಿಯನ್ನು ತೆರೆದಾಗ ಮನೆಯ ಸಾಂಸ್ಕøತಿಕ ಲೋಕ ಅನಾವರಣಗೊಳ್ಳುತ್ತದೆ. ಪ್ರಮುಖ 6ಅಧ್ಯಾಯಗಳಲ್ಲಿ ಈ ಕೃತಿ ನಿರ್ಮಾಣಗೊಂಡಿದೆ. ಕೃತಿ ಬರವಣಿಗೆಯ ಹಿಂದಿನ ಆಳವಾದ ಅಧ್ಯೆಯನ ಹಾಗೂ ಸಾಹಿತ್ಯಿಕ ಶಿಸ್ತನ್ನು ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಎ.ಎ.ಸನದಿ, ಡಾ. ಸರಜೂ ಕಾಟ್ಕರ್, ಬಿ.ಎಫ್.ಕಲ್ಲಣ್ಣವರ್, ಡಾ.ರಾಮಕೃಷ್ಣ ಮರಾಠೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.