Belagavi

ಬೆಳಗಾವಿ ಜಂಗಮ ಸಮಾಜದ ವತಿಯಿಂದ ಎಂ.ವಿ. ಹಿರೇಮಠರವರಿಗೆ ಸನ್ಮಾನ..!

Share

ನಾಗರಿಕ ಸೇವಾ ವ್ಯವಸ್ಥೆಯಲ್ಲಿ ಗುಣಾತ್ಮಕ ನಾಗರಿಕ ಸ್ನೇಹಿ ಸೇವೆ ಹಾಗೂ ಮುಂದಾಳ್ವತ್ವವನ್ನು ಗುರುತಿಸಿ ಬೆಳಗಾವಿ ಜಿಲ್ಲಾಡಳಿತದಿಂದ ಪ್ರಶಸ್ತಿ ಪಡೆದ ಎಂ.ವಿ ಹಿರೇಮಠರನ್ನು ಬೆಳಗಾವಿಯ ಜಂಗಮ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಂ.ವಿ. ಹಿರೇಮಠ ರವರಿಗೆ ಸೇವಾ ವ್ಯವಸ್ಥೆಯಲ್ಲಿನ ಗುಣಾತ್ಮಕತೆ, ನಾಗರಿಕ ಸ್ನೇಹಿ, ಮೌಲ್ಯವರ್ಧಿತ ಸೇವೆ ಹಾಗೂ ಮುಂದಾಳತ್ವವನ್ನು ಗಮನಿಸಿ ಜಿಲ್ಲಾಡಳಿತದಿಂದ ನಾಗರಿಕ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಿನ್ನೆ ಶುಕ್ರವಾರ ಕುಮಾರಸ್ವಾಮಿ ಲೇಔಟ್‍ನ ರಾಯಲ್ ಗಾರ್ಡನ್‍ನಲ್ಲಿ, ಬೆಳಗಾವಿ ಜಂಗಮ ಸಮಾಜದ ವತಿಯಿಂದ ಎಂ.ವಿ. ಹಿರೇಮಠ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಜಿ ಎಂ.ವಿ. ಹಿರೇಮಠರವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೆರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಒಬ್ಬ ಸರಕಾರಿ ಆಡಳಿತದಲ್ಲಿದ್ದರೂ ಯಾವ ರೀತಿ ಆಡಳಿತವನ್ನು ಮಾಡಬೇಕೆಂಬುದನ್ನು ಹಿರೇಮಠರನ್ನು ನೋಡಿ ಕಲಿಯಬೇಕು. ಸರಕಾರಿ ಹುದ್ದೆಯಲ್ಲಿದ್ದರೂ ದರ್ಪದಿಂದ ಕಾರ್ಯ ಮಾಡದೇ ಸಾರ್ವಜನಿಕವಾಗಿ ಕಾರ್ಯ ಮಾಡಿದಾಗ ಅದು ಜನಾನುರಾಗಿ ಎನಿಸುತ್ತದೆ. ಅವರಿಗೆ ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೇ ಕಾರ್ಯ ಮಾಡುವ ಒಳ್ಳೆಯ ಮನಸ್ಸಿದೆ. ಹಾಗಾಗಿ ಅವರು ಈ ಪ್ರಶಸ್ತಿಗೆ ಯಾವುದೇ ಅರ್ಜಿ ಹಾಕಿದವರೆಲ್ಲ. ಹಾಗಾವಿ ಹಿರೇಮಠರ ಸೇವೆ ಅನನ್ಯ ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಸವದಿ, ಜಿ.ಎಸ್ ಪಾಟೀಲ್, ಎಂ.ಜೆ ಶಿವಕುಮಾರ್, ಎಂ.ಜೆ.ಶಿವಕುಮಾರ್, ವೀರುಪಾಕ್ಷಯ್ಯ ನೀಲಗಿಮಠ, ಶೋಭಾ ಹೊಸಮಠ ಮೊದಲಾದವರು ಉಪಸ್ಥಿತರಿದ್ದರು.

 

Tags: