ಭಾರತೀಯ ಮೀಸಲು ಪೊಲೀಸ್ ಪಡೆಯ ವಿಜಯಪುರದ ಅರಕೇರಿ ಕೇಂದ್ರಕ್ಕೆ ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್‍ಕುಮಾರ್ ಅವರು ಭೇಟಿ, ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಶುಕ್ರವಾರ ಬೆಳಿಗ್ಗೆ ವಿಜಯಪುರದ ಅರಕೇರಿ ಐಆರ್‍ಬಿ ಪಡೆಯ ಕೇಂದ್ರಕ್ಕೆ ಭೇಟಿ ನೀಡಿದ ಎಡಿಜಿಪಿ ಅಲೋಕ್‍ಕುಮಾರ್ ಅವರು ಸರಮೋನಿಯಲ್ ಪರೇಡ್ ವೀಕ್ಷಣೆ ಮಾಡಿ ವೀಕ್ಷಿಸಿದರು.
ಇದೇ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕುಂದು ಕೊರತೆ ಆಲಿಸಿದರು. ಬಳಿಕ ಪಡೆಯ ಕಮಾಂಡೆಂಟ್‍ಗಳ ಜೊತೆಗೆ ಬಸ್‍ನಲ್ಲಿ ಸಂಚರಿಸಿದ ಅಲೋಕ್‍ಕುಮಾರ್ ಕಮಾಂಡೆಂಟ್ ಎಸ್.ಡಿ.ಪಾಟೀಲ್ ನೇತೃತ್ವದಲ್ಲಿ ಪಡೆಯ ಅಧಿಕಾರಿ, ಸಿಬ್ಬಂದಿಗಳ ಶ್ರಮದಾನದಿಂದ ನಿರ್ಮಿಸಿರುವ ಗಾರ್ಡನ್, ಕ್ರೀಡಾ ಮೈದಾನ, ಮಕ್ಕಳ ಗಾರ್ಡನ್, ಬೇಕರಿ, ಮಿಲ್ಕ್ ಪಾರ್ಲರ್‍ಗಳನ್ನು ಉದ್ಘಾಟಿಸಿದರು. ನಂತರ ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಅಲೋಕ್‍ಕುಮಾರ್ ಅವರು ಕಮಾಂಡೆಂಟ್ ಎಸ್.ಡಿ.ಪಾಟೀಲ್ ಅವರ ನಿವೃತ್ತಿ ಹೊಂದಿರುವ ಹಿನ್ನೆಲೆ ಅವರನ್ನು ಸತ್ಕರಿಸಿ ಗೌರವಿಸಿ, ಬೀಳ್ಕೊಟ್ಟರು.
ಈ ವೇಳೆ ಎಸ್.ಡಿ.ಪಾಟೀಲ್ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಎಡಿಜಿಪಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಎಸ್‍ಪಿ ಆನಂದಕುಮಾರ್, ಕಮಾಂಡೆಂಟ್‍ಗಳಾದ ರಾಮಕೃಷ್ಣ ಪ್ರಸಾದ್, ಬಸವರಾಜ್ ಜಿಳ್ಳೆ, ಆರ್.ಜನಾರ್ಧನ್, ಬಿ.ಎಂ.ಪ್ರಸಾದ್, ಡಾ.ರಾಮಕೃಷ್ಣ ಮುದ್ದೆಪಾಲ್, ರಮೇಶ ಬೋರಗಾವಿ, ಹಂಜಾ ಹುಸೇನ್, ಕೆ.ಎಂ.ಮಹಾದೇವ ಪ್ರಸಾದ್, ಟಿ.ಸುಂದರ್‍ರಾಜ್, ಬಿ.ಡಿ.ಲೋಕೇಶ್, ಎಸ್.ಯುವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.