ಬೆಳಗಾವಿಯ ಪ್ರಮುಖ ಮಾರುಕಟ್ಟೆ ಸ್ಥಳ ಎಂದರೆ ಅದು ಖಡೆಬಜಾರ್. ಅಲ್ಲಿ ವ್ಯಾಪಾರ ವಹಿವಾಟು ನಡಿಯದೇ ಇದ್ರೆ ಬೆಳಗಾವಿ ನಗರ ಡಲ್ ಹೊಡಿಯತ್ತೆ. ಆದರೆ ಇತ್ತೀಚೆಗೆ ಖಡೆಬಜಾರ್‍ನಲ್ಲಿ ವೇಶ್ಯಾವಾಟಿಕೆಯ ಕರಿ ನೆರಳು ಆವರಿಸುತ್ತಿದ್ದು ವ್ಯಾಪಾರಸ್ಥರು ಹಾಗೂ ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿಯ ನಗರದಲ್ಲಿ ವ್ಯಾಪಾರು ವಹಿವಾಟು ಎಂದಾಕ್ಷಣ ಕಣ್ಣ ಮುಂದೆ ಬರೋದೇ ಖಡೆಬಜಾರ್‍ನ ದೃಶ್ಯಗಳು. ತರಕಾರಿಯಿಂದ ಹಿಡಿದು ಕುಟುಂಬವನ್ನು ನಡೆಸಲು ಎಲ್ಲರಿಗೂ ಬೇಕಾಗಬಹುದಾದ ಎಲ್ಲಾ ವಸ್ತುಗಳು ಅಲ್ಲಿ ಸಿಗುತ್ತವೆ. ಇನ್ನು ಸಾಯಂಕಾಲವಾಗುತ್ತಿದ್ದಂತೆ ಖಡೇಬಜಾರ್ ಮಧುವಣಗಿತ್ತಿಯಂತೆ ಸಿಂಗಾರಗೊಂಡು ಗ್ರಾಗಕರನ್ನು ತನ್ನತ್ತ ಆಕರ್ಷಿಸುತ್ತದೆ.
ಇದರಿಂದ ವ್ಯಾಪಾರಿಗಳ ಮುಖದಲ್ಲಿಯೂ ಕೂಡ ಸಂತಸ ಮೂಡುತ್ತೆ. ಆದರೆ ಕೆಲ ತಿಂಗಳುಗಳಿಂದಾಗಿ ಈ ವ್ಯಾಪಾರಿ ಸ್ಥಳಕ್ಕೆ ವೇಶ್ಯಾವಾಟಿಕೆಯ ಕರಿನೆರಳು ಆವರಿಸಿ ಖಡೇಬಜಾರ್ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ಖಡೆಬಜಾರ್ ವ್ಯಾಪಾರಸ್ಥರ ವೆಲ್‍ಫೇರ್ ಅಸೋಸಿಯೇಶನ್ ದೂರಿದ್ದಾರೆ. ಈ ಕುರಿತಂತೆ ಇಲ್ಲಿನ ವ್ಯಾಪಾರಸ್ಥರು ಹಾಗೂ ಸ್ಥಳೀಯ ರಹವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಸಂಜೆಯಾಗುತ್ತಿದ್ದಂತೆ ಇಲ್ಲಿ ವೇಶ್ಯೆಯರು ಬಂದು ವ್ಯಾಪಾರಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಹಾಗಾಗಿ ಈ ಕುರಿತಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯುನೈಟೆಡ್ ಟ್ರೇಡರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಜಾಫರ್ ಮಾತನಾಡಿ, ಇಷ್ಟು ದಿನ ಈ ಖಡೆಬಜಾರ್ ಮಾರ್ಕೆಟ್‍ನಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದು. ಆದರೆ ಇತ್ತೀಚೆಗೆ ಇಲ್ಲಿ ವೇಶ್ಯೆಯರು ಬಂದು ವ್ಯಾಪಾರವನ್ನು ಹಾಳು ಮಾಡುತ್ತಿದ್ದಾರೆ. ಇನ್ನು ಈ ವೇಶ್ಯೆಯರಿಂದಾಗಿ ಒಳ್ಳೆಯ ಜನ ಮಾರ್ಕೆಟ್‍ಗೆ ಬರಲು ಮುಂದಾಗುತ್ತಿಲ್ಲ. ಹಾಗಾಗಿ ಇದರಿಂದ ತೊಂದರೆಯಾಗುತ್ತಿದೆ. ಸರಕಾರ ನಮಗೆ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದಭ್ದಲ್ಲಿ ಮಾತನಾಡಿದ ಖಡೇಬಜಾರ್ ಅಸೋಸಿಯೇಶನ್ ಕಾರ್ಯದರ್ಶಿಯಾದ ಅಜಾಜ್ ಇನಾಮದಾರ್ ಮಾತನಾಡಿ ಇಲ್ಲಿ ಸಯಂಕಾಲವಾಗುತ್ತಿದ್ದಂತೆ ವೇಶ್ಯೆಯರ ಕಾಟ ಹೆಚ್ಚಾಗುತ್ತಿದೆ. ಇಲ್ಲಿಗೆ ಬಂದು ಅವರು ವ್ಯಾಪಾರವನ್ನು ಹಳು ಮಾಡುತ್ತಿದ್ದಾರೆ. ಇನ್ನು ಕೆಲ ಗ್ರಾಹಕರು ಹಾಗು ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಗ್ರಾಹಕರು ಮಾರ್ಕೆಟ್‍ಗೆ ಬರುತ್ತಿಲ್ಲ. ಇನ್ನು ವೇಶ್ಯೆಯರಿಗಾಗಿಯೆ ಒಂದು ಸ್ಥಳವನ್ನು ಅವರಿಗೆ ನೀಡಿ. ಇಲ್ಲವಾದರೆ ಇಲ್ಲಿನ ಎಲ್ಲಾ ಗ್ರಾಹಕರು ಒಬ್ಬೊಬ್ಬರಾಗಿ ಇಲ್ಲಿಂದ ಬೇರೆಡೆಗೆ ತೆರಳಬೇಕಾಗುತ್ತದೆ. ಇದರಿಂದ ಬೆಳಗಾವಿಯ ಹೃದಯ ಭಾಗದಲ್ಲಿರುವ ಖಡೆಬಜಾರ್ ಒಂದು ದಿನ ರೆಡ್ ಲೈಟ್ ಏರಿಯಾ ಆಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನು ಈ ಕುರಿತಂತೆ ಪೊಲೀಸರು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಡೆಬಜಾರ್ ವ್ಯಾಪಾರಿ ಅಸೋಸಿಯೇಶನ್‍ನ ಪ್ರಸನ್ನ ಎಂಬವರು ಮಾತನಾಡಿ, ಮಾರ್ಕೆಟ್‍ಗೆ ಜನ ಬರುವ ವೇಳೆ ಈ ವೇಶ್ಯೆಯರಿಂದ ತೀವೃ ತೊಂದರೆಯಾಗುತ್ತಿದೆ. ಇಲ್ಲಿ ಅವರು ಬಂದು ನಿಂತುಕೊಂಡು ಗ್ರಾಹಕರು ಹಾಗೂ ವ್ಯಾಪಾರಸ್ಥರೊಂದಿಗೆ ತಂಟೆಮಾಡುತ್ತಿದ್ದಾರೆ. ಈ ಹಿಂದೆ ಗಣಪತಗಲ್ಲಿಯಲ್ಲಿ ಈ ರೀತಿಯ ಘಟನೆಯಾಗಿ ಇಡೀ ಬೆಳಗಾವಿ ಒಂಉ ದಿನ ಬಂದ್ ಆಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಈ ಕುರಿತಂತೆ ಸಿಪಿಐರವರಿಗೆ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಈ ವೇಶ್ಯಾವಾಟಿಕೆ ದಂಧೆಯಿಂದಾಗಿ ಮಾರ್ಕೆಟ್‍ನಲ್ಲಿ ಎಲ್ಲರಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತಂತೆ ಜನತೆ ಹಲವಾರು ಬಾರಿ ಪೊಲೀಸ್ ಇಲಾಖೆಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಇನ್ನಾದರೂ ಪೊಲೀಸ್ ಇಲಾಖೆ ಈ ಕಡೆಗೆ ತಿರುಗಿ ನೋಡುತ್ತಾ ಎಂದು ಕಾದು ನೋಡಬೇಕಿದೆ.