Athani

ಬಿ.ಆರ್.ಅಂಬೇಡ್ಕರ್‍ ಅವಮಾನ ಖಂಡಿಸಿ ಅಥಣಿ ಬಂದ್ ಸಂಪೂರ್ಣ ಯಶಸ್ವಿ

Share

ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನ ಡಾ.ಬಾಬಾಸಾಹೇಬ ಅಂಬೇಡ್ಕರ್‍ಅವರ ಭಾವಚಿತ್ರ ತೆಗೆಯುವವರೆಗೆ ನಾನು ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್‍ ಅವರಿಗೆ ಅವಮಾನ ಮಾಡಿದ ಘಟನೆಯನ್ನ ಖಂಡಿಸಿ ಇಂದು ಅಥಣಿ ಸಂಪೂರ್ಣ ಬಂದ್ ಮಾಡಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿ ಪ್ರತಿಭಟಿಸಲಾಯಿತು.

ಅಥಣಿಪಟ್ಟಣದಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಹಾರ ಹಾಕುವದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಭಾವಚಿತ್ರಕ್ಕೆಚಪ್ಪಲಿಹಾರ ಹಾಕಿ ಅದರ ಮೆರವಣಿಗೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಜಾರ ಪೇಟ,ಸೀರಿ ಬಜಾರ,ಬುಧವಾರ ಪೇಟ,ಬಸವೇಶ್ವರ ವೃತ್ತದಿಂದ ಮುಖಾಂತರ ಹಾಯ್ದು ಮೀರಜ್ಕಾಗವಾಡ ರಸ್ತೆ ಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ರಾಯಚೂರ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ವಿರುದ್ದ ಧಿಕ್ಕಾರ ಕೂಗಿ ತಮ್ಮಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪೌರಕಾರ್ಮಿಕ ಜಿಲ್ಲಾ ಅಧ್ಯಕ್ಷ ಬಸವರಾಜ್‍ಕಾಂಬ್ಳೆ ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಒಬ್ಬ ನ್ಯಾಯ ಕೊಡುವಂಥ ವ್ಯಕ್ತಿಯಾಗಿ ಡಾ.ಬಿ.ಆರ್.ಅಂಬೇಡ್ಕರ್‍ ಅವರ ಭಾವ ಚಿತ್ರ ತೆಗೆಯುವವರೆಗೆ ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಹೇಳಿ ಡಾ.ಬಾಬಾಸಾಹೇಬರಿಗೆ ಅವಮಾನ ಮಾಡಿದ್ದಾರೆ ಕೂಡಲೇ ಅವರನ್ನ ಅವರ ಸ್ಥಾನದಿಂದ ವಜಾ ಮಾಡಬೇಕು ಅμÉ್ಟೀ ಅಲ್ಲದೇ ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿ ದೇಶದ್ರೋಹದ ಮೇಲೆ ಗಡಿಪಾರು ಮಾಡಬೇಕು ಅವರನ್ನ ವಜಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಬೃಹತ್ ಪ್ರಮಾಣ ಪ್ರತಿಭಟನೆ ಅμÉ್ಟೀ ಅಲ್ಲದೇ ಹಲವು ದಿನ ಕಳೆದರೂ ಸರ್ಕಾರ ಮೌನ ವಹಿಸಿದೆ ಒಂದು ವೇಳೆ ನ್ಯಾಯಾದೀಶನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವದು ಎಂದರು.

ನಂತರ ಡಾ.ಪ್ರಕಾಶ ಅಂಬೇಡ್ಕರ್ ಬ್ರಿಗ್ರೇಡ್‍ ತಾಲೂಕಾ ಅಧ್ಯಕ್ಷ ಮಹಾಂತೇಶ ಮಾಡಗಿ ಮಾತನಾಡಿ ರಾಯಚೂರಿನಲ್ಲಿ ನಡೆದ ಘಟನೆ ಯಿಂದ ಇಡೀ ದೇಶವೇ ತಲೆತಗ್ಗಿಸುವ ಕಾರ್ಯವಾಗಿದೆ. ಸರ್ಕಾರಕೂಡಲೇ ಮಲ್ಲಿಕಾರ್ಜುನಗೌಡನ ಮೇಲೆ ಕೇಸ್ ದಾಖಲಿಸಿ ಈ ದೇಶದಿಂದ ಹೊರಹಾಕಬೇಕು.ಇಲ್ಲದಿದ್ದರೆ ದಲಿತರೆಲ್ಲರೂ ಸೇರಿಕೊಡಲಿ,ಕುಡಗೋಲು ಹಿಡಿದು ಉಗ್ರ ಹೋರಾಟ ಮಾಡಲಾಗುವದು. ಮತ್ತೋಮ್ಮೆ ಭೀಮಾಕೋರೆಗಾಂವ್‍ ಯುದ್ದದ ರೀತಿಯಲ್ಲಿ ಇಲ್ಲಿಯೂ ನೆನಪಿಸಬೇಕಾಗುತ್ತದೆ ಎಂದರು,
ಇದೆ ವೇಳೆ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಅಸ್ಲಂ ನಾಲಬಂದ್ ಮಾತನಾಡಿ ನೀಚ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ಮಾಡಿರುವ ಅವಮಾನ ಎಲ್ಲ ಸಮಾಜಕ್ಕೆ ಮಾಡಿದ ಅವಮಾನ ಇಡೀ ದೇಶ ಡಾ.ಬಿ.ಆರ್.ಅಂಬೇಡ್ಕರ್‍ ಅವರು ಬರೆದ ಸಂವಿಧಾನದ ಮೇಲೆ ದೇಶ ನಡೆಯುತ್ತಿದೆ ಅವರು ಕಾನೂನು ಮಾಡದಿದ್ದರೆ ನಾವೆಲ್ಲರೂ ಎಲ್ಲಿರುತ್ತಿದ್ದೇವೋ ದೇವರಿಗೆಗಿತ್ತು ಅಂತಹ ಮಹಾನ್ ನಾಯಕರಿಗೆ ಅವಮಾನ ಮಾಡಿದ ಆ ನ್ಯಾಯಾದೀಶನಿಗೆ ಉಗ್ರ ಶಿಕ್ಷೆ ನೀಡಬೇಕು ಅಲ್ಲಿಯವರೆಗೂ ಮುಸ್ಲಿಂ ಸಮಾಜವೂಕೂಡ ಪ್ರತಿಭಟನೆ ಮಾಡುತ್ತದೆಎಂದರು.
ಈ ವೇಳೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

 

 

Tags: