Belagavi

ನದಾಫ್ ಪಿಂಜಾರ್ ಸೊಸೈಟಿ ವಿರುದ್ಧ ರಾಜ್ಯ ಸೌಹಾರ್ದ ಫೆಡರಲ್ ಕೋ ಆಪ್ ಲಿಮಿಟೆಡ್ ಅಧ್ಯಕ್ಷರಿಗೆ ಮನವಿ

Share

ಬೆಳಗಾವಿಯ ದರ್ಬಾರ ಗಲ್ಲಿಯಲ್ಲಿರುವ ನದಾಫ್ ಪಿಂಜಾರ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣ ಹೂಡಿರುವ ಗ್ರಾಹಕರ ಹಣವನ್ನು ಮರಳಿ ಕೊಡಿಸಬೇಕೆಂದು ಗ್ರಾಹಕರು ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ ಆಪ್ ಲಿಮಿಟೆಡ್ ಅಧ್ಯಕ್ಷರಿಗೆ ಮನವಿ ಮಾಡಿದರು.

ದರ್ಬಾರ ಗಲ್ಲಿಯಲ್ಲಿರುವ ನದಾಫ್ ಪಿಂಜಾರ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಕಷ್ಟು ಜನ ಗ್ರಾಹಕರು ಎಫ್‍ಡಿ, ಉಳಿತಾಯ ಖಾತೆ ಹಾಗೂ ಪಿಗ್ಮಿ ಖಾತೆಗಳ ಮೂಲಕ ಹಣ ತೊಡಗಿಸಿದ್ದಾರೆ. ಆದರೆ ಈಗ ಸಂಸ್ಥೆ ಬಾಗಿಲು ಮುಚ್ಚಿದ್ದು ಗ್ರಾಹಕರು ಹಣ ನೀಡುವಂತೆ ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಕೇಳಿದರೆ ಯಾರೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಂಡು ಗ್ರಾಹಕರ ಹಣವನ್ನು ಹಿಂದಿರುಗಿಸಬೇಕೆಂದು ಮಹೇಶ ನಗರದಲ್ಲಿರು ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ ಆಪ್ ಲಿಮಿಟೆಡ್ ಅಧ್ಯಕ್ಷರ ಕಚೇರಿಗೆ ತೆರಳಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಹಕರು, ನಮ್ಮ ಹನವನ್ನು ಹಿಂದಿರುಗಿಸುವಂತೆ ಬ್ಯಾಂಕಿನ ಅಧ್ಯಕ್ಷರಿಗೆ ಹೇಳಿದರೆ ನೀವು ಹಣ ಯಾರ ಹತ್ತಿರ ಕೊಟ್ಟಿದ್ದೀರಿ ಅವರನ್ನೇ ಕೇಳಿ ಎಂದು ಹೇಳುತ್ತಿದ್ದಾರೆ. ಇನ್ನು ನಿಮ್ಮ ಹಣವನ್ನು ನಾಣೂ ಭೇರೆ ಕಡೆ ತೊಡಗಿಸಿದ್ದೇನೆ. ನೀವು ಬೇಕಾದರೆ ನನ್ನ ಮೇಲೆ ಪೊಲೀಸ್ ಕಂಪ್ಲೈಂಟ್ ಕೊಡಿ. ನನ್ನ ಹತ್ತಿರ ಬರದೇ ಯಾರ ಹತ್ತಿರ ಹಣ ನೀಡಿದ್ದೀರೋ ಅವರನ್ನೇ ಕೇಳಿ ಎಂದು ಹೇಳುತ್ತಿದ್ದಾರೆ ಎಂದು, ತಮ್ಮ ಅಳಲನ್ನು ತೋಡಿಕೊಂಡರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಇನ್ನೋರ್ವ ಗ್ರಾಹಕರು, ನಾನು ವಾಚ್ ಮ್ಯಾನ್‍ಆಗಿ ಕೆಲಸ ಮಾಡುತ್ತೇನೆ. ನಾನು ದುಡಿದು ಗಳಿಸಿದ 6ಲಕ್ಷ ರೂಪಾಯಿಗಳನ್ನು ಈ ಸೊಸೈಟಿಯಲ್ಲಿ ಇಟ್ಟಿದ್ದೇನೆ. ಆದರೆ ಕಳೆದ ಎರಡು ವರ್ಷಗಳಿಂದ ನಮ್ಮ ಹಣವನ್ನು ನಮಗೆ ನೀಡದೇ ಸತಾಯಿಸುತ್ತಿದ್ದಾರೆ. ನಮ್ಮನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆ.

ಈಗ ನಾವು ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಎಂದು ತಮ್ಮ ಗೋಳನ್ನು ತೋಡಿಕೊಂಡರು.
ಇನ್ನು ಗ್ರಾಹಕರು ನದಾಫ್ ಪಿಂಜಾರ್ ಸೊಸೈಟಿಯ ವಿರುದ್ಧ ಜಿಲ್ಲಾಧಿಕಾರಿಗಳಿಗೂ ಕೂಡ ಮನವಿಯನ್ ನಉ ಸಲ್ಲಿಸಿದ್ದಾರೆ. ತಮ್ಮ ಹಣವನ್ನು ಮರಕಳಿಸಬೇಕೆಂದು ಮನವಿ ಮಾಡಿದ್ದಾರೆ. ತಮ್ಮ ಹಣವನ್ನು ಹಿಂದಿರುಗಿಸಿ ನೊಂದವರ ಕಣ್ಣೀರು ಒರೆಸಬೇಕೆಂಬುದು ಇವರ ಆಗ್ರಹವಾಗಿದೆ.

 

Tags: