ಬೆಳಗಾವಿ ನಗರದಲ್ಲಿ ದ್ವಿಚಕ್ರವಾಹನಗಳನ್ನು ಟೋಯಿಂಗ್ ಮಾಡುತ್ತಿರುವುದು ಹಾಗೂ ಸಾರ್ವಜನಿಕರಿಗೆ ರಸ್ತೆಗಳಲ್ಲಿ ಕಿರಿಕಿರಿ ಮಾಡುತ್ತಿರುವ ಪೊಲೀಸರಕ್ರಮಕ್ಕೆ ಎಸ್‍ಸಿ ಹಾಗೂ ಎಸ್‍ಟಿ ನಾಯಕರುತೀವೃ ವಿರೋಧ ವ್ಯಕ್ತಪಡಿಸಿದರು.
ಬೆಳಗಾವಿಯ ಮಾರ್ಕೆಟ್ ಎಸಿಪಿ ಸದಾಶಿವ ಕಟಿಮನಿ ಎಸ್‍ಸಿ ಎಸ್‍ಟಿ ಸಮುದಾಯದಜೊತೆಕುಂದುಕೊರತೆ ಸಭೆ ನಡೆಸಿದರು.ಈ ವೇಳೆ ಮಾತನಾಡಿದದಲಿತ ಮುಖಂಡರುತಮ್ಮಮೇಲೆಆಗುತ್ತಿರುವಅನ್ಯಾಯದ ಬಗ್ಗೆ ಎಸಿಪಿ ಸದಾಶಿವ ಕಟ್ಟಿಮನಿಯವರ ಗಮನಕ್ಕೆ ತಂದರು.ಈ ವೇಳೆ ಮಾತನಾಡಿದದಲಿತ ಮುಖಂಡರು, ನೀರಿನ ಸಮಸ್ಯೆ, ಅಂಬೇಡ್ಕರ್ ಭವನ ಶುಲ್ಕ, ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.
ಈ ವೇಳೆ ಸದಾಕೊಲಕಾರ, ಬಾಬು ಪೂಜಾರಿ, ಮತ್ತಿತರರು ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ, ಇದರಜೊತೆಟ್ರೋಫಿಕ್ ಪೆÇಲಿಸರು ವಾಹನಗಳನ್ನು ಪರೀಶಿಲಿಸುವಾಗ ವಾಹನ ಸವಾರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹಾಗೂ ಯಾವುದೇ ವಾಹನ ಟೋಯಿಂಗ್ ಮಾಡುವಾಗ 5 ನಿಮಿಷಗಳ ಮೊದಲು ಸೂಚನೆ ಕೊಡಬೇಕು. ಹಾಗೂ ಸಾಮಾನ್ಯಜನ 1650ರೂ. ದಂಡಕೊಡಲುಸಾಧ್ಯವಿಲ್ಲ. ಅದಕ್ಕೆದಂಡಕಡಿಮೆ ಮಾಡಬೇಕೆಂದು ಈ ವೇಳೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನೇಕ ದಲಿತ ಮುಖಂಡರು ಹಾಗೂ ಪೆÇೀಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಉಪಸ್ಥಿತರಿದ್ದರು.