ಈ ಬಾರಿಯ ಬಜೆಟ್ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಂಡನೆಯಾಗಿದ್ದು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಾರಿಯ ಬಜೆಟ್ ಕೊವಿಡ್ ಕರಿ ನೆರಳಿನಿಂದ ಹೊರಬಂದು ಮಂಡಿಸಿದ ಬಜೆಟ್ ಆಗಿದೆ. ಕಳೆದ ಎರಡು ವರ್ಷಗಳ ಕಾಲ ಕೊವಿಡ್ ಇದ್ದಿದ್ದರಿಂದ ಸಮಗ್ರ ಅಭಿವೃದ್ಧಿಯ ಬಜೆಟ್ ಮಂಡಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಆರ್ಥಿಕತೆ ಹಿಂಜರಿತವಾಗಿತ್ತು ಈ ಬಾರಿ ಆರ್ಥಿಕತೆ ಹೆಚ್ಚಿಸುವ ಉದ್ದೇಶದಿಂದ ಉತ್ಪಾದನೆ ಹೆಚ್ಚಳ, ಅನುಭೋಗದಲ್ಲಿ ಹೆಚ್ಚಳ ಕುರಿತಂತೆ ಸಮಗ್ರ ದೃಷ್ಟಿಯನ್ನು ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ದೇಶದ ಆರ್ಥಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯ ಮಾಡಲಾಗಿದೆ. ಕೊವಿಡ್ ನಂತರದ ಭಾರತದಲ್ಲಿ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟನಲ್ಲಿ ಬಜೆಟ್ ಮಾಡಲಾಗಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ದೊಡ್ಡ ಹೂಡಿಕೆಯಾಗುತ್ತಿದ್ದು ಆರ್ಥಿಕತೆಯನ್ನು 9.2 ಗೆ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ ಎಂದರು.
ಇನ್ನು ಈ ಬಜೆಟ್ನಲ್ಲಿ ಕೇಂದ್ರ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿಯನ್ನು ಏಕಕಾಲದಲ್ಲಿ ಸಮಾನವಾಗಿ ಮಾಡುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ. ಇನ್ನು ನಮ್ಮ ದೇಶವನ್ನು ಕೃಷಿಯಲ್ಲಿ ಸ್ವಾವಲಂಬಿಯಾಗಿ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ನ್ಯಾಚುರಲ್ ಫಾರ್ಮಿಂಗ್ ಹಾಗೂ ಆಯಿಲ್ ಸೀಡ್ಸ ಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆತ್ಮ ನಿರ್ಭರ ಭಾರತಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ದೇಶದಲ್ಲಿ ಕ್ಯಾಪಿಟಲ್ ಅಕೌಂಟ್ಗಳನ್ನು ಹೆಚ್ಚಿಸಲಾಗಿದೆ ಎಂದರು.
ಇನ್ನು ಈ ಬಜೆಟ್ ಕರ್ನಾಟಕದ ಮಟ್ಟಿಗೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಾಕಷ್ಟು ಅಭಿವೃದ್ಧಿಗೆ ಸಹಾಯಕವಾಗಲಿದೆ. ಇನ್ನು ಎಂಎಸ್ಎಂಇ ಗಳಿಗೆ 5ಸಾವಿರ ಕೋಟಿ ಇದ್ದುದನ್ನು 5ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಇನ್ನು ಕನಾಟಕ ದೇಶದಲ್ಲಿಯೇ ಅತೀದೊಡ್ಡ ಎಂಎಸ್ಎಂಇ ಹೊಂದಿರುವ ರಾಜ್ಯವಾಗಿದೆ. ಹಾಗಾಗಿ ಇದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಇನ್ನು ಕೇಂದ್ರ ಬಜೆಟ್ ಅಂಪೂರ್ಣ ಅಭಿವೃದ್ಧಿಯ ಬಜೆಟ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಇದು ರಾಜ್ಯದಲ್ಲಿ ಯಾವೆಲ್ಲ ಬೆಳವಣಿಗೆಗಳಿಗೆ ಕಾರಣವಾಗಲಿದೆ ಎಂದು ಕಾದು ನೋಡಬೇಕಿದೆ.

