ಹಲವು ಬಾರಿ ಮನವಿ ಮಾಡಿದರೂ ಎಲ್ ಆಂಡ್ ಟಿ ಕಂಪನಿ ಹೊಸ ನೀರಿನ ಸಂಪರ್ಕ ನೀಡಿರಲಿಲ್ಲ. ಆದ್ದರಿಂದ ಕೊನೆಗೆ ನಗರಸೇವಕ ರವಿ ಸಾಳುಂಕೆ ಸ್ವಂತ ಖರ್ಚಿನಲ್ಲಿ ನೀರಿನ ಸಂಪರ್ಕ ಕಲ್ಪಿಸಿ ಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
: ವಾರ್ಡ್ ನಂ.27ರ ಬಸವನ ಗಲ್ಲಿ ಮತ್ತು ಪವಾರ ಗಲ್ಲಿಯಲ್ಲಿ ಹಲವು ದಿನಗಳಿಂದ ನೀರಿನ ಸಮಸ್ಯೆ ಇತ್ತು. ಈ ಬಗ್ಗೆ ನಗರಸೇವಕ ರವಿ ಸಾಳುಂಖೆ ಅವರು ಎಲ್ ಅಂಡ್ ಟಿ ಕಂಪನಿಗೆ ದೂರು ನೀಡಿದ್ದರು. ಜನರು ಹೊಸ ಸಂಪರ್ಕ ನೀಡುವಂತೆ ಮನವಿ ಮಾಡಿದ್ದರು. ಆದರೆ ಹೊಸ ಸಂಪರ್ಕ ನೀಡುವ ಕೆಲಸ ಸ್ಥಗಿತಗೊಂಡಿದೆ ಎಂದು ಕಂಪನಿ ತಿಳಿಸಿತ್ತು.
ಇದರಿಂದ ರವಿ ಸಾಳುಂಖೆ ತನ್ನ ಸ್ವಂತ ಖರ್ಚಿನಲ್ಲಿ ಹೊಸ ನಳದ ವ್ಯವಸ್ಥೆಯನ್ನು ಮಾಡಿದರು. ಈ ಕಾರ್ಯಕ್ಕೆ ನಗರಸೇವಕ ರವಿ ಸಾಳುಂಕೆ ಅವರಿಗೆ ಇಲ್ಲಿನ ಸ್ಥಳೀಯರಿಗೆ ಅಭಿನಂದನೆ ಸಲ್ಲಿಸಿದರು.