Belagavi

ಲಕ್ಷ ಬಿಲ್ವಾರ್ಚನೆ ಹಾಗೂ ಇಷ್ಟ ಲಿಂಗ ದೀಕ್ಷಾ ಕಾರ್ಯಕ್ರಮ :

Share

ಲೋಕ ಕಲ್ಯಾಣಾರ್ಥವಾಗಿ ಸರ್ವ ದುಷ್ಠಾರಿಷ್ಟ ದೋಷ ನಿವಾರಣೆಗಾಗಿ ಬಿ.ಕೆ.ಕಂಗ್ರಾಳಿಯ ಕಲ್ಮೇಶ್ವರ ನಗರದಲ್ಲಿ ಶ್ರೀ ಸಿದ್ದಿ ವಿನಾಯಕ ಗುರುಕುಲ ಮತ್ತು ವನಸ್ಪತಿ ಸಂಶೋಧನಾ ಕೇಂದ್ರದಿಂದ ಡಿ.5 ರಂದು ಗಣ ಹೋಮ, ಮೃತ್ಯುಂಜಯ ಹೋಮದೊಂದಿಗೆ, ಸಹಸ್ರ ಲಿಂಗಾರ್ಚನೆ ಜೊತೆಗೆ ಲಕ್ಷ ಬಿಲ್ವಾರ್ಚನೆ ಹಾಗೂ ಇಷ್ಟ ಲಿಂಗ ದೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಮೂರ್ತಿ ಶಂಕರಯ್ಯ ಶಾಸ್ತ್ರೀ ಹೇಳಿದರು.

ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಗಣ ಹೋಮ, ಮೃತ್ಯುಂಜಯ ಹೋಮದೊಂದಿಗೆ, ಸಹಸ್ರ ಲಿಂಗಾರ್ಚನೆ ಜೊತೆಗೆ ಲಕ್ಷ ಬಿಲ್ವಾರ್ಚನೆಯಿಂದ ಕಲ್ಮೇಶ್ವರ ನಗರದಲ್ಲಿ ಕೊರೊನಾ ಸಂದರ್ಭದಲ್ಲಿ ಯಾರೊಬ್ಬರಿಗೆ ಅಪಾಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಹೋಮ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳ ಹಿಂದೆಯೇ ಆಯೋಜಿಸಲಾಗಿತ್ತು. ಸರಕಾರ ಕೊರೊನಾ ಹಿನ್ನೆಲೆಯಲ್ಲಿ ಡಿ.5 ರಂದು ಮಾಡಲಾಗುತ್ತಿದೆ ಎಂದರು.ಪೂಜೆ ಮಾಡುವವರ ಹೆಸರನ್ನು ಮೊದಲಿಗೆ ನೋಂದಣಿ ಮಾಡಬೇಕು. ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದರು

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಮಂಗಳಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕೆಎಲ್ಇ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು.ಃಙಖಿಇಚಂದ್ರಶೇಖರ ಶಾಸ್ತ್ರೀಗಳು, ಶ್ರೀಶೈಲ್ ಪೂಜಾರಿ, ಶಿವಾನಂದ ಶಾಸ್ತ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: