Belagavi

ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ VTU ಮುಂದೆ ಪ್ರತಿಭಟನೆ

Share

ರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿನಾಕಾರಣ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಇಂದು VTU ಮುಂದೆ ABVP ಪ್ರತಿಭಟನೆ ಮಾಡುತ್ತಿದ್ದು

ಆ ಸಂದರ್ಭದಲ್ಲಿ ಸೌಮ್ಯತೆಯಿಂದ ಮನವಿಯನ್ನು ಸ್ವೀಕರಿಸದೆ ಕುಲಪತಿಗಳು ಗುಂಡಾವರ್ತನೆ ಮಾಡುವುದರ ಮೂಲಕ ತಮ್ಮ ದರ್ಪವನ್ನು ಮೆರೆದಿದ್ದಾರೆ. ಮನವಿ ಕೊಡಲು ಹೋದಂತ ಸಂದರ್ಭದಲ್ಲಿ ನಿಮ್ಮನ್ನು ವಿಶ್ವವಿದ್ಯಾಲಯದ ಒಳಗಡೆ ಬರಲು ಯಾರು ಅನುಮತಿ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ .ಹೋರಾಟಸ್ಥಳಕ್ಕೆ ಬಂದ ತಕ್ಷಣವೇ ವಿದ್ಯಾರ್ಥಿಗಳಿಗೆ ನೀವು ಏನು ಕೇಳುತ್ತೀರಿ ಎಂದು ಹೇಳುವುದರ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಗುಂಡಾ ವರ್ತನೆ ಮಾಡುತ್ತಿರುವ ಕುಲಪತಿಗಳಿಂದ ವಿದ್ಯಾರ್ಥಿಗಳಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ .

 

ಕುಲಪತಿಗಳ ಈ ವರ್ತನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಕುಲಪತಿಗಳು ತಮ್ಮ ವರ್ತನೆಯಿಂದ ಹಿಂದೆ ಸರಿಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ABVP ಹೋರಾಟ ಮಾಡಬೇಕಾಗುತ್ತದೆ ಎಂದು ಕುಲಪತಿಗಳಿಗೆ ಎಚ್ಚರಿಕೆ ನೀಡುತ್ತದೆ.

Tags: