meeting

ದಿ.18 ರಂದು ಆದಿಲ್ ಶಾಹಿ ರಾಜಮನೆತನದ ಇತಿಹಾಸದ 19 ಸಂಪುಟಗಳ ಬಿಡುಗಡೆ

Share

ವಿಜಯಪುರ…  ಜಗತ್ತಿಗೆ ಮಾದರಿಯಾಗುವಂತಹ ವಿಜಯಪುರದ ಆದಿಲ್‌ಶಾಹಿ ರಾಜಮನೆತನದ ಇತಿಹಾಸವನ್ನು 22 ಪುಸ್ತಕಗಳ 19 ಸಂಪುಟಗಳಲ್ಲಿ ಪ್ರಕಟಿಸಲಾಗಿದ್ದು, ಎಲ್ಲ 22 ಪುಸ್ತಕಗಳನ್ನು ಡಿಸೆಂಬರ್ 18ಕ್ಕೆ ಬೆಂಗಳೂರಿನ ಬಸವಸಮಿತಿ ಸಭಾಂಗಣದಲ್ಲಿ ಮಾಜಿ ವಿದೇಶಾಂಗ ಮಂತ್ರಿ ಸಲ್ಮಾನ ಖುರ್ಶಿದ ಬಿಡುಗಡೆಗೊಳಿಸಲಿದ್ದಾರೆ ಎಂದು ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಕೃಷ್ಣ ಕೊಲ್ಲಾರ ಕುಲಕರ್ಣಿ ಹೇಳಿದರು.

ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಒಂದು ರಾಜಮನೆತನದ ಸಂಪೂರ್ಣ ಇತಿಹಾಸವನ್ನು ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಣೆ ಮಾಡಿರುವುದು ಇದೆ ಮೊದಲು ಭಾರತವನ್ನು ಮುಸ್ಲಿಂ ರಾಜರುಗಳು ಸುಮಾರು 900 ರಿಂದ 1000 ವರ್ಷಗಳ ಕಾಲ ದೇಶದ ಹಲವು ಭಾಗಗಳಲ್ಲಿ ಆಳ್ವಿಕೆ ಮಾಡಿದ್ದಾರೆ.

ಅದು ಕೇವಲ ವಿಜಯಪುರದ ಆದಿಲ್ ಶಾಹಿ ಮನೆತನ ಮಾತ್ರ ಅದನ್ನು ಕನ್ನಡಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು. ಮಾದ್ಯಮಗೋಷ್ಠಿಯಲ್ಲಿ ಸಂಶೋಧನಾ ಕೇಂದ್ರದ ವಿ.ಡಿ.ಐಹೊಳೆ, ಮದಬಾವಿ ಹಾಗೂ ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

 

Tags: