Belagavi

ನಾನು ಹೇಳಿರುವ ಹಿಂದು ಪದದ ಕುರಿತು ಬಿಜೆಪಿಯವರು ಲಾಭಪಡೆಯುವ ಹುನ್ನಾರ ನಡೆಸಿದ್ದಾರೆ. ಸತೀಶ ಜಾರಕಿಹೊಳಿ

Share

ನೋಂದಣಿ ಕಂಪ್ಯೂಟರ್ ಉತಾರ, ಮನೆ ಕಟ್ಟಲು ಪರವಾನಿಗೆ ಪತ್ರ, ಅಂಗಡಿ, ವ್ಯವಹಾರಿಕ ಲೈಸನ್ಸ್, ಆಸ್ತಿ ವರ್ಗಾವಣೆ ಸೇರಿದಂತೆ ಇನ್ನಿತರರು ವಿಷಯಗಳಲ್ಲಿ ಠರಾವ್ ಇಲ್ಲದೆ ಬಿ.ಕೆ.ಕಂಗ್ರಾಳಿ ಗ್ರಾಪಂ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳು ಸೋಮವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದವು.

ಬಿ.ಕೆ.ಕಂಗ್ರಾಳಿ ಗ್ರಾಪಂನವರು ಎಸ್ಸಿ, ಎಸ್ಟಿ ಅನುದಾನವನ್ನು ದುರ್ಬಳಕೆ‌ ಮಾಡಿರುವ ಕುರಿತು ಮೂಲ ‌ನಿವಾಸಿಯಾದ ಅಂಬೇಡ್ಕರ್ ಗಲ್ಲಿಗೆ ಅನುದಾನ ನೀಡದೆ ಬೇರೆ, ಬೇರೆ ವಾಡ್೯ಗಳಿಗೆ ಅನುದಾನ ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಶಂಕರ ಪಾಟೀಲ ಎಂಬುವರಿಗೆ ಕಳೆದ 2016-17ನೇ ಸಾಲಿನಲ್ಲಿ ವ್ಯವಹಾರಿಕವಾಗಿ ಹಾಲಿ‌ನ ಡೈರಿ ಎಂದು ಲೈಸನ್ಸ್ ಕೊಟ್ಟಿದ್ದಾರೆ. ಅದು ದನದ ಕೊಟ್ಟಿಗೆಯಾಗಿದೆ. ಅಂಬೇಡ್ಕರ್ ಗಲ್ಲಿಯ ಜನರಿಗೆ ಕಿರಿಕಿರಿಯಾಗುತ್ತಿದ್ದು ಅವರು ಇಲ್ಲಿಯವರೆಗೆ ಎಷ್ಟು ತೆರಿಗೆ ತುಂಬಿದ್ದಾರೆ ಎಂದು ಪಟ್ಟು ಹಿಡಿದರು.

ಪಿಡಿಓ ಅವರು ಆಸ್ತಿ ಪುಸ್ತಕವನ್ನು ಪರಿಶಿಷ್ಟ ಜಾತಿಯ ಹುಡುಗಿಯ ಕಡೆಯಿಂದ ಮರಾಠಿ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಅನುದಾನ ಮಾಡಿಕೊಂಡು ಹಣ ದುರುಪಯೋಗ ‌ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇವೆಲ್ಲವನ್ನು ಇತ್ಯರ್ಥ ಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Tags: