Politics

ಶಕ್ತಿ ಸಂಗಮದ ಹೆಸರಿನಲ್ಲಿ ಸಮಾವೇಶ ;ಜಯತೀರ್ಥ ಕಟ್ಟಿ

Share

ವಿಜಯಪುರ: ರಾಜ್ಯ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಮಾವೇಶ “ಶಕ್ತಿಸಂಗಮ” ವು ಡಿಸೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ರಾಜ್ಯ ಪ್ರಕೋಷ್ಠಗಳ ಸಹ ಸಂಚಾಲಕ ಜಯತೀರ್ಥ ಕಟ್ಟಿ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ‌ ಮಾತನಾಡಿ

ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ-ಸಂಚಾಲಕರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಇದಕ್ಕೆ ಅಪೇಕ್ಷಿತರು. 16 ಸಾವಿರದಿಂದ 18 ಸಾವಿರ ಜನರನ್ನು ಆಹ್ವಾನಿಸಲಾಗಿದೆ. 15ರಿಂದ 16 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪ್ರಕೋಷ್ಠವು ಕೀ ಓಟರ್ಸ್‍ಗಳನ್ನು ಒಳಗೊಂಡಿದ್ದು, ನಿರ್ದಿಷ್ಟವಾಗಿ ಸಮಾಜದಲ್ಲಿ ಮತ ಗಳನ್ನು ತಂದು ಕೊಡುವ ನಿರೀಕ್ಷೆ ಇದೆ. 2023ರ ಚುನಾವಣೆಯಲ್ಲಿ ನಮ್ಮ ಬೂತ್ ನಮ್ಮ ಹೆಮ್ಮೆ ಎಂಬ ಪ್ರತಿಜ್ಞೆ ಮಾಡಿ ಶೇ 50ಕ್ಕಿಂತ ಹೆಚ್ಚು ಮತ ಗಳಿಸುವತ್ತ ಕಾರ್ಯ ಪ್ರವೃತ್ತ ರಾಗಲಿದ್ದಾರೆ ಎಂದರು. ಬಿಜೆಪಿಯಲ್ಲಿ ವಿವಿಧ 24 ಪ್ರಕೋಷ್ಠಗಳಿದ್ದು,

ಎಲ್ಲ ಪ್ರಕೋಷ್ಠಗಳು ಸೇರಿ 50 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಎಲ್ಲರನ್ನೂ ಸೇರಿಸುವ ಉದ್ದೇಶದಿಂದ ಶಕ್ತಿ ಸಂಗಮದ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವಷ್ಣವಿ ಉದ್ಘಾಟನೆ ನೆರವೇರಿಸುವರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸುವರು. ಬಿ.ಎಲ್. ಸಂತೋಷ ಸಮಾರೋಪ ಭಾಷಣೆ ಮಾಡುವರು ಎಂದರು.

 

Tags: