Belagavi

ಸರ್ವ ಪಕ್ಷಗಳ ಮತ್ತು ಕನ್ನಡ ಪರ ಸಂಘಟನೆಗಳ ಸಭೆ ಕರೆದು ಚರ್ಚಿಸಿ: ಅಶೋಕ ಚಂದರಗಿ

Share

ಇದೇ ಡಿಸೆಂಬರ್ 14 ರಂದು ಕೇಂದ್ರ ಗೃಹ ಸಚಿವ ಆಮಿತ ಶಾ ಅವರು ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಸಂಬಂಧ ಕರೆದಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವ ಪಕ್ಷಗಳ ಮತ್ತು ಕನ್ನಡ ಪರ ಸಂಘಟನೆಗಳ ಸಭೆ ಕರೆದು ಚರ್ಚಿಸಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದರು.

ಬೆಳಗಾವಿ ಉಪನಗರವಾದ ವಡಗಾವಿಯಲ್ಲಿ ಇಂದು ಮುಂಜಾನೆ ಡಾ.ರಾಜಕುಮಾರ ಅಭಿಮಾನಿಗಳ ಸಂಘವು ಆಯೋಜಿಸಿದ್ದ ಕನ್ನಡ ಪರಸಂಘಟನೆಗಳ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದ ಅಶೋಕ ಚಂದರಗಿ ಅವರು, ಬೊಮ್ಮಾಯಿ ಅವರು ಮಹಾಜನ ವರದಿಯ ಚೌಕಟ್ಟಿನಲ್ಲಿಯೇ ಚರ್ಚಿಸಬೇಕು, ರಾಜ್ಯ ವಿಧಾನ ಮಂಡಲವು ಅಂಗೀಕರಿಸಿದ ನಿರ್ಣಯದ ಪ್ರಕಾರವೇ ಮಾತುಕತೆ ಮಾಡಬೇಕು ಎಂದು ಆಗ್ರಹಿಸಿದರು.


ಗಡಿವಿವಾದವನ್ನು ಸತತವಾಗಿ ಜೀವಂತವಿಡಲು ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿಯ ಎಲ್ಲ ಪಕ್ಷಗಳ ಮುಖಂಡರು ಸತತವಾಗಿ ಯತ್ನಿಸುತ್ತಿದ್ದಾರೆ. ಅಲ್ಲಿಯ ಶಾಸಕರು,ಸಂಸದರು ,ಮಂತ್ರಿಗಳು ಒಗ್ಗಟ್ಟಿನಿಂದ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವಾಗ ನಮ್ಮ ರಾಜ್ಯದ ಜನಪ್ರತಿನಿಧಿಗಳು ಮೌನ ವಹಿಸಿರುವದು ಸರಿಯಲ್ಲ ಎಂದು ಹೇಳಿದರು.

ಹಿರಿಯ ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಶಂಕರ ಹುಲಮನಿ, ವಿನಯ ಢವಳಿ, ಶಂಕರ ಬಾಗೇವಾಡಿ, ರಾಜು ಸಂಕಪಾಳ ಅರುಣ ಸಳವಟಗಿ ಲಕ್ಷ್ಮೀಲೋಕರಿ. ಅವರು, ಡಿಸೆಂಬರ್ 19 ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನ ಕಾಲಕ್ಕೆ ಮಹಾ ಮೇಳಾವಾ ನಡೆಸಲು ಮ.ಏ.ಸಮಿತಿಗೆ ಅನುಮತಿ ನೀಡಬಾರದೆಂದು ಜಿಲ್ಲಾಡಳಿತವನ್ನು ಆಗ್ರಹಿಸುವ ನಿರ್ಣಯವನ್ನು ಸಭೆಯು ಅಂಗೀಕರಿಸಿತು.

Tags: