Belagavi

ಮಾದಿಗ ಒಳ ಮಿಸಲಾತಿಗಾಗಿ ಸುವರ್ಣಸೌಧಕ್ಕೆ ಚಲೋ- ಪ್ರಕಾಶ ಹೋಸಮನಿ.

Share

ಮಾದಿಗ ಸಮಾಜ ಒಳಮಿಸಲಾತಿಯ ಎ ಜೆ ಸದಾಶಿವ ಆಯೋಗ ಜಾರಿಗ ತರುವಂತೆ ಆಗ್ರಹಿಸಿ ಹುಕ್ಕೇರಿ ನಗರದಲ್ಲಿ ಹೋರಾಟದ ರೂಪ ರೇಷೆಯ ಸಭೆ ಜರುಗಿತು.

 

ಮಾಜ ಮುಖಂಡ ಮಹಾವೀರ ಐಹೋಳೆ  ನಿಜ ಶರಣ ಮಾದರ ಚೆನ್ನಯ್ಯ ರವರ  ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬೆಳಗಾವಿ ನಗರದಲ್ಲಿ ಡಿಸೆಂಬರ್ 19 ರಿಂದ ಜರಗುವ ಅಧಿವೇಶನದಲ್ಲಿ ರಾಜ್ಯದಲ್ಲಿ ಸುಮಾರು 75 ಲಕ್ಷ ಜನ ಮಾದಿಗ ಸಮಾಜಕ್ಕೆ ಒಳಮಿಸಲಾತಿ ಕಲ್ಪಿಸಬೇಕು ಇಲ್ಲವಾದರೆ ಸುವರ್ಣಸೌಧದಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.

 

ತಾಲೂಕು ಮುಖಂಡ ಪ್ರಕಾಶ ಹೋಸಮನಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಮಾದಿಗ ಸಮಾಜ ಒಳ ಮಿಸಲಾತಿಗಾಗಿ ಹೋರಾಟ ಮಾಡುತ್ತಿದೆ ಈಗ ಸರ್ಕಾರ ಮಿಸಲಾತಿ ಘೋಷನೆ ಮಾಡಿ ನಮ್ಮ ಸಮಾಜಕ್ಕೆ ನ್ಯಾಯವದಗಿಸಬೇಕು ಎಂದರು

ಸಂಕೇಶ್ವರ ಮುಖಂಡ ಮಹೇಶ ಹಟ್ಟಿಹೋಳಿ ಮಾತಮಾಡಿ ಮಿಸಲಾತಿಗಾಗಿ ಹುಕ್ಕೇರಿ ತಾಲೂಕಿನ ಎಲ್ಲ ಮಾದಿಗ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸುವರ್ಣಸೌಧಕ್ಕೆ ಉಗ್ರ ಹೋರಾಟ ಮಾಡಲಾಗುವದು ಎಂದರು

ಈ ಸಂದರ್ಭದಲ್ಲಿ ಶಶಿಕಾಂತ ಹೋನ್ನಳ್ಳಿ, ಮುತ್ತೆಪ್ಪಾ ಮಾದರ, ಸದಸಶಿವ ಮಾದರ, ಸುಮಿತ ಮಾದರ, ಸಂಜಿವ ಕಟ್ಟಿಮನಿ, ಕೆಂಪಣ್ಣಾ ಮಾದರ, ಅರ್ಜುನ ಮಾಳಗೆ, ಮಹಾದೇವ ಮಾದರ ಮೊದಲಾದ ಹುಕ್ಕೇರಿ, ಸಂಕೇಶ್ವರ ,ರಾಯಭಾಗ ಚಿಕ್ಕೋಡಿ ಭಾಗದ ಮಾದರ ಚನ್ನಯ್ಯ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags: