ಲವ್ ಡೇಲ್ ಸೆಂಟ್ರಲ್ ಸ್ಕೂಲ್ ಶನಿವಾರ ಆಯೋಜಿಸಿದ್ದ ಸಿಬಿಎಸ್ ಇ 19 ವರ್ಷದೊಳಗಿನವರ ಕ್ಲಸ್ಟರ್ ಮಟ್ಟದ ಫುಟ್ ಬಾಲ್ ಪಂದ್ಯಾವಳಿ ದಿ. 3 ರಂದು ಬೆಳಿಗ್ಗೆ ಪ್ರಾರಂಭವಾಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ 26ನೇ ಬೆಟಾಲಿಯನ್ ನ ಕರ್ನಲ್ ದರ್ಶನ್ ಅಸೋಡೇಕರ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮೀ ಇಂಚಲ ಅವರು ಎಲ್ಲಾ ಸ್ಪರ್ಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಂಸ್ಥೆಯ ಅಧ್ಯಕ್ಷ ರಾಜ್ ಘಾಟ್ಗೆ ಮತ್ತು ನಿರ್ದೇಶಕಿ ಪ್ರೇರಣಾ ಘಾಟ್ಗೆ ವಂದಿಸಿದರು. ಕ್ರೀಡಾ ಶಿಕ್ಷಕ ಬಸು ಅಗಸಗಿ ಸ್ವಾಗತಿಸಿದರು. ಗಣ್ಯರಿಂದ ದೀಪ ಬೆಳಗಿಸಲಾಯಿತು. ರಾಜ್ಯಾದ್ಯಂತ 56 CBSE ಶಾಲಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಮೂರು ದಿನಗಳ ಹಗಲು-ರಾತ್ರಿ ಪಂದ್ಯಾವಳಿಯಲ್ಲಿ 800ಕ್ಕೂ ಹೆಚ್ಚು ಫುಟ್ಬಾಲ್ ಆಟಗಾರರು ಭಾಗವಹಿಸಿದ್ದಾರೆ. ಇದರಲ್ಲಿ ಬೆಂಗಳೂರು, ಮೈಸೂರು, ಗುಲ್ಬರ್ಗ, ಮಂಗಳೂರು, ಉಡುಪಿ, ದಾವಣಗೆರೆ, ಬಿಜಾಪುರ, ಮಂಡ್ಯ, ಬೀದರ್, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಗದಗ, ರಾಯಚೂರು, ಶಿವಮೊಗ್ಗ, ರಾಮನಗರ, ತುಮಕೂರು, ಹುಬ್ಬಳ್ಳಿ, ಧಾರವಾಡ ಮುಂತಾದೆಡೆ ವಿದ್ಯಾರ್ಥಿಗಳು ಸೇರಿದ್ದಾರೆ. ಅನೇಕ ಅತ್ಯುತ್ತಮ ಫುಟ್ಬಾಲ್ ಆಟಗಾರರು ಭಾಗವಹಿಸುವ ಮೂಲಕ ಸ್ಪರ್ಧೆಯು ವರ್ಣರಂಜಿತವಾಗಿದೆ. ಸೋಮವಾರ ದಿ.5 ರಂದು ಫೈನಲ್ ಪಂದ್ಯದ ಬಳಿಕ ಸಂಜೆ ಬಹುಮಾನ ವಿತರಣೆ ನಡೆಯಲಿದೆ.