Agriculture

ಮಳೆಗೆ ಹಾನಿಯಾದ ವಿದ್ಯುತ್ ಕಂಬ ಸರಿಪಡಿಸಲು ಆಗ್ರಹ

Share

ರೈತರಿಗೆ ಬೇಸಿಗೆಯಲ್ಲಿ ಹತ್ತು ಗಂಟೆ ವಿದ್ಯುತ್ ನೀಡಬೇಕು ಹಾಗೂ ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ನೇಗಿಲಯೋಗಿ ರೈತ ಸೇವಾ ಸಂಘದಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.

 

ಈ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾದ್ಯಕ್ಷ ರವಿ ಪಾಟೀಲ ಅವರು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಖಾನಾಪುರ, ಕಿತ್ತೂರ, ಯರಗಟ್ಟಿ, ಸವದತ್ತಿ ಮತ್ತು ಎಲ್ಲಾ ತಾಲೂಕು, ಗ್ರಾಮೀಣ ಬಾಗದಲ್ಲಿ ರೈತರ ಜಮೀನುಗಳಲ್ಲಿ ಈ ಬಾರಿ ಸುರಿದ ಬಾರಿ ಮಳೆಯಿಂದ ವಿದ್ಯುತ್ ಕಂಬಗಳು ಬೀಳುವ ಸ್ತಿತಿಗೆ ಬಂದಿದೆ. ಈ ಕಂಬಗಳ ವಿದ್ಯುತ್‌ ತಂತಿಗಳು ನೆಲಕ್ಕೆ ತಾಕುವಷ್ಟು ಜೋತಾಡುತ್ತಿವೆ. ಈ ವಿದ್ಯುತ್ ತಂತಿಗಳಲ್ಲಿ ಹೈ ವೋಲೇಜ ವಿದ್ಯುತ್ ಇರುವುದರಿಂದ ರೈತರ ಬೆಳೆ ಹಾಗೂ ಜೀವಕ್ಕೆ ಅಪಾಯ ಇದೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಈ ಜಮೀನುಗಳಲ್ಲಿ ರೈತರು ಕೃಷಿ ಕೆಲಸ ಮಾಡಬೇಕೆಂದರೆ ಭಯದಿಂದಲೇ ಮಾಡುತ್ತಿದ್ದಾರೆ.

ಇದರಿಂದಾಗಿ ರೈತರ ಕೃಷಿ ಕೆಲಸ ಹಿಂದೆ ಉಳಿದಿದೆ. ಹಾಗಾಗಿ ಆದಷ್ಟು ಬೇಗನೇ ವಿದ್ಯುತ್ ಕಂಬ ಮತ್ತು ತಂತಿ ಸರಿ ಪಡಿಸಿಕೊಡಬೇಕು. ಗ್ರಾಮೀಣ ಬಾಗದಲ್ಲಿ ಸಿಬ್ಬಂದಿ ಕೊರತೆ ಕೂಡಾ ಇರುವುದರಿಂದ ಹೆಸ್ಕಾಂ ಅಧಿಕಾರಿಗಳು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

Tags: