Belagavi

ಮಹಾರಾಷ್ಟ್ರ, ಗೋವಾಗೆ ಹೋಗಬೇಡಿ: ಸಿಎಂ ಭೇಟಿಯಾಗಿ ಚರ್ಚೆ ಮಾಡೋಣ:  ಬೆಳಗಾವಿ ಉದ್ಯಮಿಗಳಿಗೆ ಅಭಯ್ ಪಾಟೀಲ್ ಮನವಿ..!

Share

ಆಂಕರ್: ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಗೆ ಆಗಿರುವ ಅನ್ಯಾಯದ ಬಗ್ಗೆ ಇಲ್ಲಿನ ಉದ್ಯಮಿಗಳು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಇಂದು ಉದ್ಯಮಿಗಳು ಮತ್ತು ಜನಪ್ರತಿನಿಧಿಗಳ ಮಹತ್ವದ ಸಭೆ ಕರೆಯಲಾಗಿತ್ತು.
ವಾ.ಓ: ಹೌದು ಸೋಮವಾರ ಬೆಳಗಾವಿಯ ಉದ್ಯಮಬಾಗದಲ್ಲಿರುವ ಚೇಂಬರ್ ಆಪ್ ಕಾಮರ್ಸನಲ್ಲಿ ಉದ್ಯಮಿಗಳ ಜೊತೆಗೆ ದಕ್ಷಿಣ ಶಾಸಕ ಅಭಯ್ ಪಾಟೀಲ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಹತ್ವದ ಸಭೆ ನಡೆಸಿದರು. ಈ ವೇಳೆ ಬೆಳಗಾವಿಯಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ವಿಶೇಷ ಒತ್ತು ನೀಡುವಂತೆ ಉದ್ಯಮಿಗಳು ಆಗ್ರಹಿಸಿದರು.

: ಸಭೆ ಮುಗಿದ ಬಳಿಕ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ನಾಳೆ ಗುರುವಾರ ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ಚರ್ಚಿಸಲು ನಮಗೆ ಮುಖ್ಯಮಂತ್ರಿಗಳು ಸಮಯ ನೀಡಿದ್ದಾರೆ. ಹೀಗಾಗಿ ಎಲ್ಲಾ ಅಸೊಸಿಯೇಷನ್ ಪದಾಧಿಕಾರಿಗಳು ಕೂಡಿಕೊಂಡು ಬೆಳಗಾವಿ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇವೆ. ಚೇಂಬರ್ ಆಪ್ ಕಾಮರ್ಸ, ಲಘು ಉದ್ಯೋಗ ಭಾರತಿ, ಸಣ್ಣ ಕೌಶಲ್ಯ ಉದ್ಯಮಿಗಳು ಭಾಗಿಯಾಗಿದ್ದರು. ಕೆಲವೊಂದು ಪ್ರಸ್ತಾವನೆಗಳನ್ನು ಬೇರೆ ರಾಜ್ಯಗಳು ಬೆಳಗಾವಿ ಉದ್ಯಮಿಗಳಿಗೆ ಆಹ್ವಾನ ನೀಡುತ್ತಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದ ಕೊಲ್ಹಾಪುರ ಬಳಿಯ ಕಾಗಲ್ ಫೈವ್‍ಸ್ಟಾರ್ ಇಂಡಸ್ಟ್ರೀಸ್‍ನಲ್ಲಿ ನಮ್ಮಲ್ಲಿ ಹೂಡಿಕೆ ಮಾಡ ಬನ್ನಿ ನಿಮಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ಗೋವಾ ಇನ್ವೆಸ್ಟರ್ ಮೀಟ್‍ನಲ್ಲಿ ಬೆಳಗಾವಿಯಲ್ಲಿ ಕೇಂದ್ರಿಕೃತ ಮಾಡಿಕೊಂಡು ನೀವು ನಮ್ಮಲ್ಲಿ ಉದ್ಯಮಗಳನ್ನು ಆರಂಭಿಸಿದ್ರೆ ಕೇವಲ 15 ದಿನಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತೇವೆ ಎನ್ನುತ್ತಿದ್ದಾರೆ. ಬಿಯಾಂಡ ಹುಬ್ಬಳ್ಳಿ-ಧಾರವಾಡ ಬೆಳಗಾವಿ ವರೆಗೂ ಆಗಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದೇವೆ. ಹೀಗಾಗಿ ಮಹಾರಾಷ್ಟ್ರ ಮತ್ತು ಗೋವಾಗೆ ಹೋಗಬೇಡಿ. ಬೆಳಗಾವಿಯಲ್ಲಿಯೇ ಅನೇಕ ಸೌಲಭ್ಯಗಳನ್ನು ಈಗಾಗಲೇ ಸರ್ಕಾರ ಕೊಟ್ಟಿದೆ. ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕೊಡುತ್ತಾರೆ. ಗುರುವಾರ ಈ ಬಗ್ಗೆ ಯೋಗ್ಯ ನಿರ್ಣಯವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದರು.

ಇದೇ ವೇಳೆ ಚೇಂಬರ್ ಆಪ್ ಕಾರ್ಮಸ ಸದಸ್ಯ ಮನೋಜ್ ಮತ್ತಿಕೊಪ್ಪ ಮಾತನಾಡಿ ನಾಲ್ಕು ದಿನದ ಹಿಂದೆ ಸಿಎಂ ಬೊಮ್ಮಾಯಿ ಅವರು ನಡೆಸಿದ ಕಾರ್ಯಕ್ರಮದಲ್ಲಿ ಎಲ್ಲಾ ಯೋಜನೆಗಳು ಹುಬ್ಬಳ್ಳಿ-ಧಾರವಾಡಕ್ಕೆ ಹೋಗುತ್ತಿವೆ ಎಂದು ನಮ್ಮಲ್ಲಿನ ಉದ್ಯಮಿಗಳು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸ್ಮಾಲ್ ಸ್ಕಿಲ್ ಇಂಡಸ್ಟ್ರೀಸ್, ಪೌಂಡ್ರಿ ಕ್ಲಸ್ಟರ್ಸ, ಬಾರ್ ಅಸೊಸಿಯೇಷನ್ ಸೇರಿ ಇನ್ನಿತರರು ಸಭೆಯಲ್ಲಿ ಭಾಗಿಯಾಗಿದ್ದರು. ಬೆಳಗಾವಿಯಲ್ಲಿ ದೊಡ್ಡ ಇಂಡಸ್ಟ್ರೀಸ್ ಆರಂಭಿಸುವ ಬಗ್ಗೆ ಸರ್ಕಾರ ಯಾವುದೇ ರೀತಿ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. 15 ದಿನ ಹಿಂದೆ ಗೋವಾ ಸಿಎಂ ನಮ್ಮ ಚೇಂಬರ್‍ಗೆ ಭೇಟಿ ನೀಡಿದ್ದ ವೇಳೆ ನಿಮಗೆ ಇಲ್ಲಿ ತೊಂದರೆ ಇದ್ದರೆ ನೀವು ಗೋವಾಗೆ ಬಂದು ಬಿಡಿ, ನಿಮಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತೇವೆ. 15 ದಿನಗಳಲ್ಲಿ ಒನ್ ವಿಂಡೋ ತಯಾರಿ ಮಾಡಿಕೊಡುತ್ತೇವೆ. ಕೊಲ್ಹಾಪುರದಲ್ಲಿಯೂ ನಮಗೆ ಇಂಡಸ್ಟ್ರೀಸ್ ಆರಂಭಿಸುವ ಬಗ್ಗೆ ಸಾಕಷ್ಟು ಅವಕಾಶಗಳು ಕೇಳಿ ಬರುತ್ತಿವೆ. ಹೀಗಾಗಿ ಅಭಯ್ ಪಾಟೀಲ್ ಮತ್ತು ಈರಣ್ಣ ಕಡಾಡಿ ಅವರಿಗೆ ವಿನಂತಿ ಮಾಡಿಕೊಂಡಿದ್ದೇವೆ. ಅತೀ ಹೆಚ್ಚು ಭೂಮಿ ಖರೀದಿ ಮಾಡಿಕೊಂಡು ನಮಗೆ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದ್ದೇವೆ ಎಂದರು.

: ಇನ್ನೊರ್ವ ಉದ್ಯಮಿ ಹೊಂಡದಕಟ್ಟಿ ಮಾತನಾಡಿ ಕಿತ್ತೂರಿನಲ್ಲಿ ಇಂಡಸ್ಟ್ರೀಯಲ್‍ಶಿಪ್ ಮಾಡಲಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೆ ಕೆಐಎಡಿಬಿ ದರ 65 ಲಕ್ಷ ರೂಪಾಯಿ ಎಕರೆ, ಇಲ್ಲಿಂದ ಹೋಗಿ ಅಲ್ಲಿ ಇಂಡಸ್ಟ್ರೀಸ್ ಮಾಡಿ, ಅಷ್ಟು ರೊಕ್ಕ ಕೊಟ್ಟು ಜಾಗ ತೆಗೆದುಕೊಂಡು ಮಾಡಲು ಸಾಧ್ಯವಿಲ್ಲ. ಅದೇ ರೀತಿ ಮಹಾರಾಷ್ಟ್ರದ ಗಡಹಿಂಗ್ಲಜದಲ್ಲಿ 8 ಲಕ್ಷ ರೂಪಾಯಿಗೆ 1 ಎಕರೆ, ಸದಲಗಾದಲ್ಲಿ 15 ಎಕರೆ ಕೊಟ್ಟು ಸೌಲಭ್ಯ ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಇಂಡಸ್ಟ್ರಿ ಮಾಡಲು ಯಾವುದೇ ರೀತಿ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

: ಸಭೆಯಲ್ಲಿ ಚೇಂಬರ್ ಆಪ್ ಕಾಮರ್ಸ ಅಧ್ಯಕ್ಷ ಹೇಮೇದ್ರ ಪೋರವಾಲ್ ಸೇರಿ ಅನೇಕ ಉದ್ಯಮಿಗಳು ಭಾಗಿಯಾಗಿದ್ದರು. ಒಟ್ಟಾರೆ ಬೆಳಗಾವಿಯಲ್ಲಿ ಉದ್ಯಮ ಆರಂಭಿಸಲು ಸರ್ಕಾರ ವಿಶೇಷ ಒತ್ತು ನೀಡುವಂತೆ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಗುರುವಾರ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿಗಳು ಅದ್ಯಾವ ರೀತಿ ನ್ಯಾಯ ಕೊಡಿಸುತ್ತಾರೆ ಎಂದು ಕಾದು ನೋಡಬೇಕಿದೆ.

Tags: